ಅಡಿಕೆ ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ (Today Areca Nut Price) ಸುದ್ದಿ ಮಾಡುತ್ತಿದೆ. ಅತ್ಯಧಿಕ ಮಳೆಯಿಂದಾಗಿ ಅಡಿಕೆ ಬೆಳೆ ನಷ್ಟಕ್ಕೀಡಾಗಿದೆ. ಅಲ್ಲದೇ ಮಳೆಯೂ ಒಂದೇ ಸಮನೆ ಸುರಿಯುತ್ತಿರುವುದರಿಂದ ಬೆಳೆ ಕಟಾವು ತಡವಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಮಾರುಕಟ್ಟೆಯಲ್ಲಿ ಕೊರತೆ ಉಂಟಾಗಿದ್ದು, ಸತತ ಏರಿಕೆಯ ಹಾದಿ ಹಿಡಿದಿದೆ.
ರಾಜ್ಯದಲ್ಲಿ ಮಲೆನಾಡು ಮಾತ್ರವಲ್ಲದೇ ಚನ್ನಗಿರಿ,ಹೊನ್ನಾಳಿ, ದಾವಣಗೆರೆ ಸೇರಿದಂತೆ ಹಲವೆಡೆ ಹೆಚ್ಚಾಗಿಯೇ ಬೆಳೆಯಲಾಗುತ್ತಿದೆ. ಮೇ – ಜೂನ್ ತಿಂಗಳಲ್ಲಿ ಇಳಿಕೆಯನ್ನು ಕಂಡಿದ್ದ ಅಡಿಕೆ ಧಾರಣೆ ದೀಪಾವಳಿಯ ಸಮೀಪಕ್ಕೆ 68,000 ಸಾವಿರದ ಗಡಿಗೆ ಬಂದು ತಲುಪಿದ್ದು, ಇನ್ನೂ ಏರಿಕೆಯಾಗುವ ನಿರೀಕ್ಷೆಯಲ್ಲಿ ಬೆಳೆಗಾರರು ಇದ್ದಾರೆ. ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಾದ ಶಿವಮೊಗ್ಗ, ಸಾಗರ, ಶಿರಸಿ, ಯಲ್ಲಾಪುರ, ಚಿತ್ರದುರ್ಗ, ತುಮಕೂರು, ಮಂಗಳೂರು ಸೇರಿದಂತೆ ಹಲವು ಮಾರುಕಟ್ಟೆಗಳ ದರ ಇಲ್ಲಿದೆ.
ಶಿವಮೊಗ್ಗ ಮಾರುಕಟ್ಟೆ (Today Areca Nut Price)
| ಅಡಿಕೆ ವಿಧಗಳು | ಕನಿಷ್ಠ ಧರ | ಗರಿಷ್ಟ ಧರ |
|---|---|---|
| ಗೋರಬಲು | 19500 | 46500 |
| ಹೊಸ ವಿಧ | 49000 | 67000 |
| ರಾಶಿ | 52000 | 67000 |
| ಸರಕು | 54500 | 100000 |
ಇದನ್ನೂ ಓದಿರಿ: Gold Price: ಹಬ್ಬದ ಖರೀದಿಯ ನಡುವೆಯೂ ಇಳಿಕೆಯತ್ತ ಸಾಗಿದ ಬೆಳ್ಳಿ-ಬಂಗಾರ, ಹೂಡಿಕೆದಾರ ಕಂಗಾಲು
ಸಾಗರ ಮಾರುಕಟ್ಟೆ
| ಅಡಿಕೆ ವಿಧಗಳು | ಕನಿಷ್ಠ ಧರ | ಗರಿಷ್ಟ ಧರ |
|---|---|---|
| ಬಿಲೆಗೋಟು | 16500 | 34000 |
| ಚಾಲಿ | 37500 | 43000 |
| ಕೆಂಪುಗೋಟು | 37500 | 41000 |
| ಸಿಪ್ಪೆಗೋಟು | 23000 | 23500 |
ಶಿರಸಿ ಮಾರುಕಟ್ಟೆ
ಬಿಲೆಗೋಟು: ಕನಿಷ್ಠ 30500, ಗರಿಷ್ಠ 37000
ಚಾಲಿ: ಕನಿಷ್ಠ 42500, ಗರಿಷ್ಠ 48500
ಕೆಂಪುಗೋಟು: ಕನಿಷ್ಠ 29500, ಗರಿಷ್ಠ 36500
ಬೆಟ್ಟೆ: ಕನಿಷ್ಠ 41000, ಗರಿಷ್ಠ 51500
ಯಲ್ಲಾಪುರ ಮಾರುಕಟ್ಟೆ
ರಾಶಿ: ಕನಿಷ್ಠ 51000, ಗರಿಷ್ಠ 64000.
ಚಾಲಿ 38500-48000,
ಕೆಂಪುಗೋಟು 24500-36000,
ಬಿಲೆಗೋಟು 22000-37000.
ಇದನ್ನೂ ಓದಿರಿ: ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ : 500 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಚಿತ್ರದುರ್ಗ ಮಾರುಕಟ್ಟೆ
ಬೆಟ್ಟೆ: ಕನಿಷ್ಠ 38500, ಗರಿಷ್ಠ 38500.
ರಾಶಿ: 63500-64000,
ಕೆಂಪುಗೋಟು 34000-34500.
ತುಮಕೂರು ಮಾರುಕಟ್ಟೆ
ರಾಶಿ: ಕನಿಷ್ಠ 58000, ಗರಿಷ್ಠ 64000.
ಮಂಗಳೂರು ಮಾರುಕಟ್ಟೆ
ಹೊಸ ವಿಧ: ಕನಿಷ್ಠ 31000, ಗರಿಷ್ಠ 36500.