ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG Price Cut) ಬಳಸುವ ಗ್ರಾಹಕರಿಗೆ ಸಿಹಿಸುದ್ದಿಯೊಂದು ಬಂದಿದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಸಿಲಿಂಡರ್ ಬೆಲೆಯನ್ನು ನವೀಕರಿಸಲಾಗುತ್ತದೆ. ಅಂತೆಯೇ ಇದೀಗ ನವೆಂಬರ್ 1 ರಂದು ಹೊಸ ದರಗಳು ಪ್ರಕಟವಾಗಲಿದೆ. ಈ ಬಾರಿ ಗ್ರಾಹಕರಿಗೆ ದರ ಇಳಿಕೆಯ ರೂಪದಲ್ಲಿ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ.
ಜಾಗತಿಕ ತೈಲದರದಲ್ಲಿನ ಕಡಿತದ ಕಾರಣಗಳಿಂದಾಗಿ ಈ ಬಾರಿಯ ಬೆಲೆ ಪ್ರಕಟಿಸುವಾಗ ಭಾರತೀಯ ತೈಲ ಕಂಪನಿಗಳು ರೆಟ್ ಕಟ್ ಮಾಡುವ ಕುರಿತು ನಿರೀಕ್ಷೆಗಳು ಹೆಚ್ಚಿವೆ. ಇದುವರೆಗೆ ಈ ಕುರಿತಂತೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಈಗಾಗಲೇ ಇರುವ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರಗಳು
ಅಕ್ಟೋಬರ್ ತಿಂಗಳಿನಲ್ಲಿ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಗಳಿದ್ದವು ಆದರೆ ಯಾವುದೇ ಬದಲಾವಣೆಗಳು ಆಗಲಿಲ್ಲ. ಪ್ರಸ್ತುತ ಈ ತಿಂಗಳಿನಲ್ಲಿ ಗ್ರಹಬಳಕೆ ಸಿಲಿಂಡರ್ ದರವು ರೂ.852 ರಿಂದ ರೂ.905 ರವರೆಗೆ ಇದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬೆಲೆ ಇಳಿಕೆಯ ಸಿಹಿ ಸುದ್ದಿ ಗ್ರಾಹಕರಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಸಿಲಿಂಡರ್ ಬೆಲೆ ಎಷ್ಟು (LPG Price Cut) ಕಡಿಮೆಯಾಗಬಹುದು?
ಭಾರತೀಯ ತೈಲ ಕಂಪನಿಗಳು ಗ್ರಾಹಕರ ಜೇಬಿಗೆ ಉಂಟಾಗುತ್ತಿರುವ ಬೆಲೆ ಹೆಚ್ಚಳದ ಒತ್ತಡವನ್ನು ಈ ಬಾರಿ ಸ್ವಲ್ಪ ಕಡಿಮೆ ಮಾಡಲಿವೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಈ ಬಾರಿಗೆ ರೂ. 20 ಕಡಿಮೆಯಾಗುವ ನಿರೀಕ್ಷೆಯು ಹೆಚ್ಚಿದೆ. ಒಂದು ವೇಳೆ ರೂ. 20 ಕಡಿತವಾದರೆ, ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಬೆಂಗಳೂರಿನಲ್ಲಿ ರೂ. 835, ಕೋಲ್ಕತ್ತಾದಲ್ಲಿ ಬೆಲೆ ರೂ. 859, ಮುಂಬೈನಲ್ಲಿ ರೂ. 832 ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೂ.833 ಕ್ಕೆ ಇಳಿಯಲಿದೆ.
ಅಧಿಕೃತ ಘೋಷಣೆ ಯಾವಾಗ?
ಪ್ರತಿ ತಿಂಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರಗಳ ಪರಿಷ್ಕರಣೆ ನಡೆಯುತ್ತದೆ. ಅದರಂತೆ ದರಗಳ ಹೊಸ ಪರಿಷ್ಕರಣೆ ಕುರಿತು ಅಧಿಕೃತ ಪ್ರಕಟಣೆ ನವೆಂಬರ್ 1, 2025 ರಂದು ಬೆಳಿಗ್ಗೆ ಪ್ರಕಟವಾಗಲಿದೆ.
ಇಂತಹ ಉಪಯುಕ್ತ ಸುದ್ದಿಗಳನ್ನು ಪ್ರತಿದಿನ ಪಡೆಯಲು ಬಯಸಿದರೆ ನೀವು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಚಾನಲ್ ಗಳಿಗೆ ಸೇರಿಕೊಳ್ಳಬಹುದು. ಅವುಗಳ ಲಿಂಕ್ ಕೆಳಗೆ ನೀಡಲಾಗಿದೆ, ಇಂದೇ ಸೇರಿಕೊಳ್ಳಿ ಮತ್ತು ಮೊದಲು ಸುದ್ದಿಯ ಲಿಂಕನ್ನು ಪಡೆಯಿರಿ.