Labour Card Scholarship: ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಈ ಕೂಡಲೇ ಹೀಗೆ ಅರ್ಜಿ ಸಲ್ಲಿಸಿ

Published On: October 17, 2025
Follow Us
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ labour-card-scholarship

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 2025-26ನೇ ಸಾಲಿಗೆ ಶೈಕ್ಷಣಿಕ ಸಹಾಯಧನಕ್ಕಾಗಿ (Labour Card Scholarship) ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಯು 31/5/2025 ಕ್ಕೂ ಮೊದಲು ನೋಂದಾಯಿಸಿಕೊಂಡಿರುವ ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ಒದಗಿಸುವ ಗುರಿಯನ್ನು ಹೊಂದಿದೆ, ಇದರಿಂದ ಕಾರ್ಮಿಕ ಕುಟುಂಬಗಳ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಬಹುದು.

ಈ ಲೇಖನವು 2025-26ನೇ ಸಾಲಿನ ಶೈಕ್ಷಣಿಕ ಸಹಾಯಧನದ ಅರ್ಹತೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅಗತ್ಯ ದಾಖಲೆಗಳು, ಮತ್ತು ಇತರ ವಿವರಗಳನ್ನು ಸಂಪೂರ್ಣವಾಗಿ ಒದಗಿಸುತ್ತದೆ, ಇದರಿಂದ ಕಾರ್ಮಿಕರು ಈ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು.

ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

  • ಕರ್ನಾಟಕದ ಕಾಯಂ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  • ಅರ್ಜಿದಾರರ ಪೋಷಕರು ಕರ್ನಾಟಕ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 31/5/2025 ಕ್ಕೂ ಮೊದಲು ನೋಂದಾಯಿಸಿಕೊಂಡಿರಬೇಕು.
  • ವಿದ್ಯಾರ್ಥಿಗಳು ತಮ್ಮ ಕೊನೆಯ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು. ಮೀಸಲಾತಿ ವರ್ಗದ ವಿದ್ಯಾರ್ಥಿಗಳು ಕನಿಷ್ಠ 45% ಅಂಕಗಳನ್ನು ಪಡೆದಿರಬೇಕು.
  • ಕುಟುಂಬದ ಮಾಸಿಕ ಆದಾಯ ರೂ. 35,000 ಮೀರಬಾರದು.
  • ಕರ್ನಾಟಕ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾದ ಮಾನ್ಯ ಕಾರ್ಮಿಕ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು

  • ಕಾರ್ಮಿಕ ಕಾರ್ಡ್
  • ದೂರವಾಣಿ ಸಂಖ್ಯೆ
  • ಲೇಬರ್ ಕಾರ್ಡ್ ನೋಂದಣಿ ಸಂಖ್ಯೆ
  • ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಮತ್ತು ಪೋಷಕರ ಆಧಾರ್ ಕಾರ್ಡ್
  • ಕಾಲೇಜು ಶುಲ್ಕ ರಶೀದಿ
  • Sats ID / Students ID / ಸ್ಯಾಟ್ಸ್ ಐಡಿ / ವಿದ್ಯಾರ್ಥಿಗಳ ಐಡಿ
  • ಹಾಸ್ಟೆಲ್ I’d (ಸರ್ಕಾರಿ ಅಥವಾ ಖಾಸಗಿ ಹಾಸ್ಟೆಲ್‌ಗಳಲ್ಲಿ ಇರುವವರಿಗೆ ಮಾತ್ರ ಅಗತ್ಯವಿದೆ)
  • ಕಾಲೇಜು ನೋಂದಣಿ ಸಂಖ್ಯೆ
  • ಪಡಿತರ ಚೀಟಿ
  • ಹಿಂದಿನ ಸೆಮ್ ಅಥವಾ ಕ್ಲಾಸ್ ಮಾರ್ಕ್ಸ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ವಿವರಗಳು
  • ಅಂಗವಿಕಲರ ಕಾರ್ಡ್ ಸಂಖ್ಯೆ (ಅನ್ವಯಿಸಿದರೆ)

ಯೋಜನೆಯ ಉದ್ದೇಶ ಮತ್ತು ಪ್ರಾಮುಖ್ಯತೆ

ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಯೋಜನೆಯಿಂದ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯ ಉತ್ತಮಗೊಳಿಸುವ ಗುರಿಯನ್ನು ಹೊಂದಿದೆ. ಅಸಂಘಟಿತ ವಲಯದ ಕಾರ್ಮಿಕರ ಆರ್ಥಿಕ ಹಿನ್ನೆಲೆಯಿಂದಾಗಿ ಶಿಕ್ಷಣದಿಂದ ವಂಚಿತರಾಗದಂತೆ, ಶಿಕ್ಷಣಕ್ಕೆ ಅಗತ್ಯ ಆರ್ಥಿಕ ಸಹಾಯ ಮಾಡಿ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಮುಂದೆ ಉತ್ತಮ ಉದ್ಯೋಗ ಹೊಂದಿ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುವಂತೆ ಸಹಾಯಕವಾಗಲಿದೆ.

ವಿದ್ಯಾರ್ಥಿಗಳಿಗೆ ಲಭ್ಯವಾಗುವ ಸಹಾಯಧನದ ಮೊತ್ತ

  • ಪ್ರಾಥಮಿಕ ಶಾಲೆ ಮಕ್ಕಳಿಗೆ – ರೂ.500 ರಿಂದ ರೂ.1,000 ಹಣ ಸಿಗುತ್ತದೆ
  • ಪ್ರೌಢಶಾಲಾ ವಿದ್ಯಾರ್ಥಿಗಳಿಗೆ – ರೂ.3,000 ಹಣ ಸಿಗುತ್ತದೆ
  • ಪಿಯುಸಿ/ಐಟಿಐ/ಡಿಪ್ಲೋಮೋ ವಿದ್ಯಾರ್ಥಿಗಳಿಗೆ ರೂ.4,000 ಹಣ ಸಿಗುತ್ತದೆ
  • ಪದವಿ ವಿದ್ಯಾರ್ಥಿಗಳಿಗೆ – ರೂ.5,000 ಹಣ ಸಿಗುತ್ತದೆ
  • ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ – ರೂ.5,000 ಹಣ ಸಿಗುತ್ತದೆ
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ – ರೂ.10,000 ಹಣ ಸಿಗುತ್ತದೆ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ – ರೂ.11,000 ಹಣ ಸಿಗುತ್ತದೆ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 31, 2025

ಇದನ್ನೂ ಓದಿರಿ: SBI Platinum Jubilee Asha Scholarship: ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಇಲ್ಲಿದೆ ಹಣಕಾಸಿನ ನೆರವು..!

ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?

  • ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (ಅಧಿಕೃತ ವೆಬ್ ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ)
  • ನಂತರ ಹೊಸ ಖಾತೆ ಸೃಜಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ವಿದ್ಯಾರ್ಥಿಯ ಆಧಾರ್ ಸಂಖ್ಯೆ, ಹೆಸರು, ದೂರವಾಣಿ ಸಂಖ್ಯೆ ಮತ್ತು ಪಾಸ್ವರ್ಡ್ ಹಾಕಿ ಖಾತೆ ತೆರೆಯಿರಿ.
  • ನಂತರ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ಇವುಗಳಲ್ಲಿ ನಿಮ್ಮ ತರಗತಿಯ ಆಯ್ಕೆಯ ಮೇಲೆ ಮುಂದುವರೆಯಿರಿ.
labour-card-scholarship-1
Labour Card Scholarship online Application Form
  • ಅರ್ಜಿದಾರರ ವಿಭಾಗದಲ್ಲಿನ ವಿದ್ಯಾರ್ಥಿ ಲಾಗಿನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿರಿ.
  • ಆನ್ ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಪೂರೈಸಿ ಮತ್ತು ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಎಲ್ಲವೂ ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಂಡು ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಕೆಯ ಪ್ರಮುಖ ಲಿಂಕುಗಳು

ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಯೋಜನೆಯ ಅಧಿಸೂಚನೆ – ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ – ಇಲ್ಲಿ ಕ್ಲಿಕ್ ಮಾಡಿ
ನೇರವಾಗಿ ಅರ್ಜಿ ಸಲ್ಲಿಸಿ – ಇಲ್ಲಿ ಕ್ಲಿಕ್ ಮಾಡಿ

ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಯಾರು ಅರ್ಹರು?

ವಿದ್ಯಾರ್ಥಿವೇತನ ಅನುದಾನಕ್ಕೆ ಅರ್ಹರಾಗಲು, ಕಾರ್ಮಿಕ ಕಾರ್ಡ್ ಹೊಂದಿದ ಪೋಷಕರ ಮಕ್ಕಳು ಹಿಂದಿನ ಪರೀಕ್ಷೆಯ ನಂತರ ಸಾಮಾನ್ಯ ವರ್ಗಕ್ಕೆ ಕನಿಷ್ಠ 50% ಮತ್ತು SC/ST ವರ್ಗಕ್ಕೆ 45% ಅಂಕಗಳನ್ನು ಪಡೆದಿರಬೇಕು.

ಕರ್ನಾಟಕದಲ್ಲಿ ಕಾರ್ಮಿಕ ಕಾರ್ಮಿಕರಿಗೆ ವಿದ್ಯಾರ್ಥಿವೇತನದ ಮೊತ್ತ ಎಷ್ಟು?

ಲೇಬರ್ ಕಾರ್ಡ್ ವಿದ್ಯಾರ್ಥಿವೇತನದ ಪ್ರಕಾರ, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಅವಲಂಬಿಸಿ ರೂ.1,100 ರಿಂದ ರೂ.11,000 ವರೆಗೆ ಆರ್ಥಿಕ ಸಹಾಯವನ್ನು ನೀಡುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಷ್ಟು?

ನೀವು ಅರ್ಜಿಯನ್ನು ಅಕ್ಟೋಬರ್ 31, 2025 ರ ಕೊನೆಯ ದಿನಾಂಕದ ಮೊದಲು ಸಲ್ಲಿಸಬೇಕು.

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವಿದ್ಯಾರ್ಥಿವೇತನ ಎಂದರೇನು?

ಆರ್ಥಿಕ ಮಿತಿಗಳ ಬಗ್ಗೆ ಯೋಚಿಸದೆ ತಮ್ಮ ಮಕ್ಕಳು ಶೈಕ್ಷಣಿಕ ಅನ್ವೇಷಣೆಗಳಲ್ಲಿ ಅಭಿವೃದ್ಧಿ ಹೊಂದಲು ಸಹಾಯ ಮಾಡಲು ಕಡಿಮೆ ಆದಾಯದ ಕಾರ್ಮಿಕರು ಮತ್ತು ಕಾರ್ಮಿಕರನ್ನು ಬೆಂಬಲಿಸಲು ಕರ್ನಾಟಕ ಸರ್ಕಾರವು ತೆಗೆದುಕೊಂಡ ಕ್ರಾಂತಿಕಾರಿ ಉಪಕ್ರಮ ಇದು.

Mahesh Kumar M.

ಮಹೇಶ್ ಕುಮಾರ್ ಎಂ. ಅವರು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯ ಉದ್ಯೋಗ ನ್ಯೂಸ್ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ಇವರು ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

Join WhatsApp

Join Now

Join Telegram

Join Now

Leave a comment