ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (Sate Bank of India) ಅಕ್ಟೋಬರ್ 2025 ರ ಅಧಿಕೃತ ಅಧಿಸೂಚನೆಯ ಮೂಲಕ ಹೂಡಿಕೆ ತಜ್ಞರು ಮತ್ತು ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಬ್ಯಾಂಕಿಂಗ್ ವಲಯದಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SBI ನ ಅಧಿಕೃತ ಜಾಲತಾಣ ಮೂಲಕ ನವೆಂಬರ್ 17 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
SBI ಹುದ್ದೆಗಳ ಅಧಿಸೂಚನೆ
ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಗಳ ಸಂಖ್ಯೆ: 103 ಹುದ್ದೆಗಳು
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆ ಹೆಸರು: ಹೂಡಿಕೆ ತಜ್ಞ ಮತ್ತು ಅಧಿಕಾರಿ
ಸಂಬಳ: ವಾರ್ಷಿಕ ರೂ.20,60,000 ದಿಂದ 1,35,00,000/-
ವಿದ್ಯಾರ್ಹತೆ
- ಮುಖ್ಯಸ್ಥರು ಹುದ್ದೆಗೆ – ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು.
- ವಲಯ ಮುಖ್ಯಸ್ಥರು, ಪ್ರಾದೇಶಿಕ ಮುಖ್ಯಸ್ಥ ಹಾಗೂ ರಿಲೇಷನ್ಶಿಪ್ ಮ್ಯಾನೇಜರ್ ಹುದ್ದೆಗಳಿಗೆ – ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
- ಇನ್ವೆಸ್ಟ್ಮೆಂಟ್ ಸ್ಪೆಷಲಿಸ್ಟ್ ಹಾಗೂ ಇನ್ವೆಸ್ಟ್ಮೆಂಟ್ ಆಫೀಸರ್ ಹುದ್ದೆಗಳಿಗೆ – ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹಣಕಾಸು/ವ್ಯವಹಾರ ನಿರ್ವಹಣೆ/ವಾಣಿಜ್ಯ/ಅರ್ಥಶಾಸ್ತ್ರ/ಬ್ಯಾಂಕಿಂಗ್/ಅಕೌಂಟೆನ್ಸಿ/ಬಂಡವಾಳ ಮಾರುಕಟ್ಟೆಗಳು/ವಿಮೆಯಲ್ಲಿ ಸ್ನಾತಕೋತ್ತರ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಸಿಎ/ಸಿಎಫ್‌ಎ ಯಲ್ಲಿ ವೃತ್ತಿಪರ ಅರ್ಹತೆಯನ್ನು ಹೊಂದಿರಬೇಕು.
- ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ ಹುದ್ದೆಗಳಿಗೆ – ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಂಬಿಎ/ಪಿಜಿಡಿಎಂ ಪದವಿ ಪೂರ್ಣಗೊಳಿಸಿರಬೇಕು.
- ಸೆಂಟ್ರಲ್ ರಿಸರ್ಚ್ ಟೀಮ್ ಹುದ್ದೆಗಳಿಗೆ – ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ವಾಣಿಜ್ಯ/ಹಣಕಾಸು/ಅರ್ಥಶಾಸ್ತ್ರ/ಮ್ಯಾನೇಜ್ಮೆಂಟ್/ಗಣಿತ/ಸಂಖ್ಯಾಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ಹುದ್ದೆಯ ಸಂಖ್ಯೆ ಮತ್ತು ವಯಸ್ಸಿನ ಮಿತಿ
| ಪೋಸ್ಟ್ ಹೆಸರು | ಪೋಸ್ಟ್ಗಳ ಸಂಖ್ಯೆ | ವಯಸ್ಸಿನ ಮಿತಿ (ವರ್ಷಗಳು) |
|---|---|---|
| ಮುಖ್ಯಸ್ಥರು | 1 | 35-50 ವರ್ಷಗಳು |
| ವಲಯ ಮುಖ್ಯಸ್ಥರು | 4 | 35-50 ವರ್ಷಗಳು |
| ಪ್ರಾದೇಶಿಕ ಮುಖ್ಯಸ್ಥ | 7 | 35-50 ವರ್ಷಗಳು |
| ರಿಲೇಷನ್ಶಿಪ್ ಮ್ಯಾನೇಜರ್ | 19 | 28-42 ವರ್ಷಗಳು |
| ಇನ್ವೆಸ್ಟ್ಮೆಂಟ್ ಸ್ಪೆಷಲಿಸ್ಟ್ | 22 | 28-42 ವರ್ಷಗಳು |
| ಇನ್ವೆಸ್ಟ್ಮೆಂಟ್ ಆಫೀಸರ್ | 46 | 28-40 ವರ್ಷಗಳು |
| ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ | 2 | 30-40 ವರ್ಷಗಳು |
| ಸೆಂಟ್ರಲ್ ರಿಸರ್ಚ್ ಟೀಮ್ | 2 | 25-35 ವರ್ಷಗಳು |
ಅರ್ಜಿ ಶುಲ್ಕ
- ಪ.ಜಾತಿ/ಪ.ಪಂಗಡ/ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
- ಯುಆರ್/ಒಬಿಸಿ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು – ರೂ.750/-
- ಪಾವತಿ ವಿಧಾನ – ಆನ್‌ಲೈನ್
ಆಯ್ಕೆ ಪ್ರಕ್ರಿಯೆ
- ಶಾರ್ಟ್ ಲಿಸ್ಟಿಂಗ್
- ಸಂದರ್ಶನ
- ದಾಖಲೆ ಪರಿಶೀಲನೆ
ವೇತನ
| ಪೋಸ್ಟ್ ಹೆಸರು | ಸಂಬಳ (ವಾರ್ಷಿಕ) |
|---|---|
| ಮುಖ್ಯಸ್ಥರು | ರೂ.1,35,00,000/- |
| ವಲಯ ಮುಖ್ಯಸ್ಥರು | ರೂ.97,00,000/- |
| ಪ್ರಾದೇಶಿಕ ಮುಖ್ಯಸ್ಥ | ರೂ.66,40,000/- |
| ರಿಲೇಷನ್ಶಿಪ್ ಮ್ಯಾನೇಜರ್ | ರೂ.51,80,000/- |
| ಇನ್ವೆಸ್ಟ್ಮೆಂಟ್ ಸ್ಪೆಷಲಿಸ್ಟ್ | ರೂ.44,50,000/- |
| ಇನ್ವೆಸ್ಟ್ಮೆಂಟ್ ಆಫೀಸರ್ | ರೂ.27,10,000/- |
| ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ | ರೂ.30,10,000/- |
| ಸೆಂಟ್ರಲ್ ರಿಸರ್ಚ್ ಟೀಮ್ | ರೂ.20,60,000/- |
Sate Bank of India ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ Sate Bank of India ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. (ಲಿಂಕ್ ಕೆಳಗೆ ನೀಡಲಾಗಿದೆ)
- ನಿಮ್ಮ ವಯಕ್ತಿಕ ಮಾಹಿತಿ ನೀಡಿ ಖಾತೆ ತೆರೆಯಿರಿ ಮತ್ತು ಲಾಗಿನ್ ಆಗಿರಿ.
- ನಂತರ ನೀವು ಅರ್ಜಿ ಸಲ್ಲಿಸಬಯಸುವ ಹುದ್ದೆಯ ಲಿಂಕನ್ನು ಕ್ಲಿಕ್ ಮಾಡಿ.
- ಮುಂದಿನ ಹಂತದಲ್ಲಿ ನೀಡಿರುವ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಪೂರೈಸಿರಿ.
- ಅಲ್ಲಿ ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿರಿ .
- ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ತುಂಬಿರಿ.
- ನಂತರ ನೀವು ನೀಡಿರುವ ಎಲ್ಲ ಮಾಹಿತಿಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಿಕೊಂಡು ಅರ್ಜಿಯನ್ನು ಸಲ್ಲಿಸಿರಿ.
- ಬಹು ಮುಖ್ಯವಾಗಿ ಅರ್ಜಿ ಸಂಖ್ಯೆಯನ್ನು ಸೆರೆಹಿಡಿದಿಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 27 ಅಕ್ಟೋಬರ್ 2025
ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ – 17 ನವೆಂಬರ್ 2025
ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: ಇಲ್ಲಿ ಕ್ಲಿಕ್ ಮಾಡಿ