ನಮಸ್ಕಾರ ಸ್ನೇಹಿತರೆ, ಇಂದು ನಾವು ತಿಳಿಸುತ್ತಿರುವುದು ರೈತರ ಬದುಕನ್ನು ಬದಲಾಯಿಸುವ ಮಹತ್ವದ ಯೋಜನೆ ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2023 ಬಗ್ಗೆ. ಈ ಯೋಜನೆಯಡಿ ಸರ್ಕಾರವು ಬೋರ್‌ವೆಲ್ ಕೊರೆಸಲು ರೂ. 4 ಲಕ್ಷದ ಸಹಾಯಧನ ನೀಡುತ್ತಿದೆ. ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೆ ಜಾರಿಗೆ ತರಲಾಗಿದೆ.
ಗಂಗಾ ಕಲ್ಯಾಣ ಯೋಜನೆ ಎಂದರೇನು?
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ರಾಜ್ಯ ಸರ್ಕಾರವು ಕೃಷಿಕರ ಸಹಾಯಕ್ಕೆ ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ಸರ್ಕಾರ ರೈತರಿಗೆ ಬೋರ್‌ವೆಲ್, ತೆರೆದ ಬಾವಿ ಮತ್ತು ಪಂಪ್‌ಸೆಟ್‌ಗಳ ವ್ಯವಸ್ಥೆ ಮಾಡುತ್ತದೆ. ನೀರಿನ ಕೊರತೆಯಿಂದ ಕೃಷಿ ನಿಲ್ಲಿಸಬೇಕಾದ ರೈತರು ಇದೀಗ ಈ ಯೋಜನೆಯಿಂದ ತಮ್ಮ ಹಳ್ಳಿಯಲ್ಲೇ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ.
ಎಷ್ಟು ಸಹಾಯಧನ ಸಿಗುತ್ತದೆ?
- ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಮತ್ತು ತುಮಕೂರು ಜಿಲ್ಲೆ ರೈತರಿಗೆ – ರೂ.4 ಲಕ್ಷ ಸಹಾಯಧನ
- ಉಳಿದ ಜಿಲ್ಲೆಗಳ ರೈತರಿಗೆ – ರೂ.3 ಲಕ್ಷ ಸಹಾಯಧನ
- ಬೋರ್‌ವೆಲ್ ಪಂಪ್ ಪೂರೈಕೆ ಮತ್ತು ವಿದ್ಯುದ್ದೀಕರಣಕ್ಕೆ – ರೂ.5 ಲಕ್ಷ ಜಮಾ
- ಈ ಯೋಜನೆ ಅಲ್ಪಸಂಖ್ಯಾತ ಸಮುದಾಯದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಾತ್ರ ಅನ್ವಯಿಸುತ್ತದೆ.
Free Borewell Scheme ಯೋಜನೆಯ ಉದ್ದೇಶ?
ಮಳೆಯ ಮೇಲೆ ಅವಲಂಬಿಸಿರುವ ಸಣ್ಣ ರೈತರಿಗೆ ನೀರಾವರಿಯ ಸೌಲಭ್ಯ ಒದಗಿಸುವುದೇ ಈ ಯೋಜನೆಯ ಮುಖ್ಯ ಗುರಿ. ಬೋರ್‌ವೆಲ್ ಅಥವಾ ತೆರೆದ ಬಾವಿ ನಿರ್ಮಾಣದ ಸಹಾಯದಿಂದ ಅವರು ಹೆಚ್ಚು ಬೆಳೆ ಬೆಳೆದು, ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು.
ಅರ್ಹತಾ ಮಾನದಂಡಗಳು
- ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.
- ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
- ವಯಸ್ಸು 18 ರಿಂದ 55 ವರ್ಷಗಳೊಳಗಿರಬೇಕು.
- ಸಣ್ಣ ಅಥವಾ ಅತಿಸಣ್ಣ ರೈತರಾಗಿರಬೇಕು.
- ನಗರ ಪ್ರದೇಶದ ವಾರ್ಷಿಕ ಆದಾಯ ರೂ.1.3 ಲಕ್ಷ ಮೀರಬಾರದು.
ಅಗತ್ಯ ದಾಖಲೆಗಳು
- ಆದಾಯ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- ಆಧಾರ್ ಕಾರ್ಡ್
- BPL ಪಡಿತರ ಚೀಟಿ
- ಇತ್ತೀಚಿನ RTC ಪ್ರತಿಗಳು
- ಭೂ ಕಂದಾಯ ಪಾವತಿ ರಶೀದಿ
- ಸಣ್ಣ ರೈತರ ಪ್ರಮಾಣಪತ್ರ
- ಸ್ವಯಂ ಘೋಷಣಾ ಪತ್ರ
- ಯೋಜನೆ ವರದಿ
ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಮಾಡಿ: https://sevasindhu.karnataka.gov.in/Sevasindhu/Kannada?ReturnUrl=%2F ಅರ್ಜಿ ನಮೂನೆಯನ್ನು ಮುದ್ರಿಸಿ. ಈ ಅರ್ಜಿ ನಮೂನೆಯನ್ನು ಇತರ ಸಂಬಂಧಿತ ದಾಖಲೆಗಳೊಂದಿಗೆ ನಿಮ್ಮ ಸಂಬಂಧಿತ ಜಿಲ್ಲೆಯ ಆಯ್ಕೆ ಸಮಿತಿಗೆ ಸಲ್ಲಿಸಿ.
ನಿಜವಾದ ಲಾಭ ಯಾರಿಗೆ?
ಈ ಯೋಜನೆಯಿಂದ ಸಾವಿರಾರು ಅಲ್ಪಸಂಖ್ಯಾತ ರೈತರಿಗೆ ಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಸಿಗುತ್ತದೆ. ಅದರಿಂದ ಬತ್ತಿದ ಜಮೀನುಗಳು ಮತ್ತೆ ಹಸಿರಾಗುತ್ತವೆ ಮತ್ತು ರೈತರ ಜೀವನಮಟ್ಟ ಮೇಲೇಳುತ್ತದೆ.
ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಹಂಚಿ — ಅವರು ಸಹ ನಿಧಿಗಳ ಸಹಾಯದಿಂದ ತಮ್ಮ ಕೃಷಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು.