ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿಯಲ್ಲಿ ಮಹಿಳೆಯರ ಸ್ವ-ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2025-26 ಸಾಲಿನಲ್ಲಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ (Free Sewing Machine scheme) ವಿತರಣೆಗಾಗಿ ಪ್ರಕಟಣೆ ಹೊರಡಿಸಲಾಗಿದ್ದು, ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗ್ರಾಮೀಣ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಅವರು ಮನೆಯಿಂದಲೇ ಕೆಲಸ ಮಾಡಿ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಮಹಿಳೆ ಸ್ವಾವಲಂಭಿಯಾಗಿ ಜೀವನ ನಡೆಸಲು ಈ ಯೋಜನೆ ಸಹಕಾರಿಯಾಗಲಿದೆ.
Free Sewing Machine ಪಡೆಯಲು ಅರ್ಹತೆಯ ಮಾನದಂಡಗಳು
- ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ವಯಸ್ಸು 20 ರಿಂದ 45 ವರ್ಷಗಳ ನಡುವೆ ಇರಬೇಕು.
- BPL (ಗರಿಷ್ಠ ಬಡತನ ರೇಖೆ) ಅಥವಾ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿರಬೇಕು.
- ಈಗಾಗಲೇ ಹೊಲಿಗೆ (ಟೈಲರಿಂಗ್) ತರಬೇತಿ ಪಡೆದಿರಬೇಕು.
- ಈ ಹಿಂದೆ ಯಾವುದೇ ಸರ್ಕಾರಿ ಯೋಜನೆಯಿಂದ ಉಚಿತ ಯಂತ್ರ ಪಡೆದಿರಬಾರದು.
- ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಇದನ್ನೂ ಓದಿರಿ: ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ವಿದ್ಯಾರ್ಥಿವೇತನ; ರೂ. 75,000ಗಳ ಆರ್ಥಿಕ ನೆರವು..!
Free Sewing Machine ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ವರ್ಗಾವಣೆ ಪ್ರಮಾಣಪತ್ರ / ಎಸ್.ಎಸ್.ಎಲ್.ಸಿ ಅಂಕಪಟ್ಟಿ / ಇನ್ನಿತರ ಪ್ರಮಾಣಪತ್ರ)
- ಶೈಕ್ಷಣಿಕ ಅರ್ಹತೆ (ವರ್ಗಾವಣೆ ಪ್ರಮಾಣಪತ್ರ / ಅಂಕಪಟ್ಟಿ) (in PDF file),
- ಜಾತಿ ಪ್ರಮಾಣ ಪತ್ರ (ಪ.ಜಾ , ಪ.ಪಂ ಮತ್ತು ಅಲ್ಪಸಂಖ್ಯಾತರವರಿಗೆ ಮಾತ್ರ)
- ಪಡಿತರ ಚೀಟಿ (BPL ಕಾರ್ಡ್)
- ಮತದಾರರ ಗುರುತಿನ ಚೀಟಿ
- ಆಯಾ ಗ್ರಾಮ ಪಂಚಾಯತಿಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ ಹೊಲಿಗೆ (ಟೈಲರಿಂಗ್) ವೃತ್ತಿ ಮಾಡುತ್ತಿರುವ ಬಗ್ಗೆ ಧೃಢೀಕರಣ ಪ್ರಮಾಣಪತ್ರ
- ವಾಸಸ್ಥಳ ಪ್ರಮಾಣಪತ್ರ ಅಥವಾ ರೇಷನ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್‌ನ ನಕಲು
- ಸಕ್ರಿಯ ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ಅರ್ಜಿ ಸಲ್ಲಿಕೆಗೆ ಬೇರೆ ಬೇರೆ ಜಿಲ್ಲೆಗಳಿಗೆ ಬೇರೆ ಬೇರೆ ದಿನಾಂಕಗಳು ಇರುತ್ತದೆ. ಕೆಲವು ಜಿಲ್ಲೆಗಳ ದಿನಾಂಕಗಳು ಈ ಕೆಳಗಿನಂತಿವೆ (ಅಕ್ಟೋಬರ್ 19, 2025ರ ಆಧಾರದ ಮೇಲೆ)
| ಜಿಲ್ಲೆ | ಅರ್ಜಿ ಪ್ರಾರಂಭ ದಿನಾಂಕ | ಕೊನೆಯ ದಿನಾಂಕ | ಸ್ಥಿತಿ |
|---|---|---|---|
| ಬೆಂಗಳೂರು ಗ್ರಾಮಾಂತರ | 23 ಅಕ್ಟೋಬರ್ 2025 | 5 ನವೆಂಬರ್ 2025 | ಪ್ರಾರಂಭವಾಗಿಲ್ಲ |
| ಮೈಸೂರು | 10 ಸೆಪ್ಟೆಂಬರ್ 2025 | 10 ಅಕ್ಟೋಬರ್ 2025 | ಮುಕ್ತಾಯಗೊಂಡಿದೆ |
| ಧಾರವಾಡ | 15 ಅಕ್ಟೋಬರ್ 2025 | 30 ನವೆಂಬರ್ 2025 | ಪ್ರಾರಂಭವಾಗಿದೆ |
| ಶಿವಮೊಗ್ಗ | 20 ಆಗಸ್ಟ್ 2025 | 20 ಸೆಪ್ಟೆಂಬರ್ 2025 | ಮುಕ್ತಾಯಗೊಂಡಿದೆ |
| ದಕ್ಷಿಣ ಕನ್ನಡ | 23 ಅಕ್ಟೋಬರ್ 2025 | 5 ನವೆಂಬರ್ 2025 | ಪ್ರಾರಂಭವಾಗಿಲ್ಲ |
| ಹಾವೇರಿ | 15 ಅಕ್ಟೋಬರ್ 2025 | 23 ಅಕ್ಟೋಬರ್ 2025 | ಪ್ರಾರಂಭವಾಗಿದೆ |
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ?
- ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಆಗಿದ್ದು, ಸೇವಾ ಸಿಂಧು ಪೋರ್ಟಲ್ (Seva Sindhu Portal) ಅಥವಾ ಗ್ರಾಮಒನ್ ಕೇಂದ್ರಗಳ ಮೂಲಕ ಸಲ್ಲಿಸಬಹುದಾಗಿದೆ.
- ಸೇವಾ ಸಿಂಧು ಪೋರ್ಟಲ್ (sevasindhu.karnataka.gov.in) ಅಥವಾ ಸಂಬಂಧಿತ ಜಿಲ್ಲಾ ಪಂಚಾಯತ್ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅರ್ಜಿ ನಮೂನೆಯಲ್ಲಿ ಕೇಳಲಾದ ವೈಯಕ್ತಿಕ ಮಾಹಿತಿ, ಆಧಾರ್ ಸಂಖ್ಯೆ, ಮತ್ತು ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ.
- ಅಲ್ಲಿ ಕೇಳಲಾದ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
- ಅರ್ಜಿ ಸಲ್ಲಿಕೆಯ ನಂತರ ದೃಢೀಕರಣಕ್ಕೆ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
- ಹತ್ತಿರದ ಗ್ರಾಮ ಒನ್ ಅಥವಾ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು.
ಇದನ್ನೂ ಓದಿರಿ: HDFC Parivartan Scholarship: ಎಲ್ಲಾ ವಿದ್ಯಾರ್ಥಿಗಳಿಗೂ ಸಿಗುತ್ತೆ ರೂ.75000 ವರೆಗೆ ವಿದ್ಯಾರ್ಥಿವೇತನ!
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಿದ ನಂತರ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ ಮತ್ತು ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆಯು ಅವರ ಆದಾಯದ ಮಟ್ಟ, ತರಬೇತಿ ಪ್ರಮಾಣಪತ್ರ ಮತ್ತು ಸಾಮಾಜಿಕ ವರ್ಗದ ಆಧಾರದ ಮೇಲೆ ಮಾಡಕಾಲಾಗುತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಯಂತ್ರ ವಿತರಣೆ ದಿನಾಂಕವನ್ನು ತಿಳಿಸಲಾಗುತ್ತದೆ.