ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಶುಭಸುದ್ದಿ! ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ 2026ರ ಅಂತಿಮ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
2026ರ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಇದೀಗ ಸ್ಪಷ್ಟವಾದ ದಿನಾಂಕಗಳು ಹಾಗೂ ಸಮಯ ಹಂಚಿಕೆ ಲಭ್ಯವಾಗಿದೆ. ಮಂಡಳಿ ಹೊಸ ವೇಳಾಪಟ್ಟಿಯನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದ್ದು, ವಿದ್ಯಾರ್ಥಿಗಳು ಈಗ ಅದನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ – ವೇಳಾಪಟ್ಟಿ ಮತ್ತು ವಿವರಗಳು
- ಎಸ್‌ಎಸ್‌ಎಲ್‌ಸಿ ಪರೀಕ್ಷೆ-1: ಮಾರ್ಚ್ 18 ರಿಂದ ಏಪ್ರಿಲ್ 2, 2026ರವರೆಗೆ
- ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ಮೇ 18 ರಿಂದ ಮೇ 25, 2026ರವರೆಗೆ
- ಪರೀಕ್ಷಾ ಸಮಯ: ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15ರವರೆಗೆ
- ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಒಂದುಸರಿಯಾಗಿ ನಡೆಸಲಾಗುವುದು.
ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಪರಿಶೀಲಿಸಲು ಮತ್ತು ಪಿಡಿಎಫ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಲು ಕೆಳಗೆ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ – ವೇಳಾಪಟ್ಟಿ
ದ್ವಿತೀಯ ಪಿ.ಯು.ಸಿ ಪರೀಕ್ಷೆಗಳು 2026ರ ಫೆಬ್ರವರಿ 28ರಂದು ಆರಂಭವಾಗಿ, ಮಾರ್ಚ್ 17ರಂದು ಅಂತ್ಯಗೊಳ್ಳಲಿವೆ. ಈ ವೇಳಾಪಟ್ಟಿ ವಿದ್ಯಾರ್ಥಿಗಳು ಮುಂಚಿತವಾಗಿ ಅಧ್ಯಯನ ಯೋಜನೆ ರೂಪಿಸಲು ಸಹಕಾರಿಯಾಗಲಿದೆ.
ವೇಳಾಪಟ್ಟಿ ಡೌನ್‌ಲೋಡ್ ಮಾಡುವ ವಿಧಾನ
- ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ: https://kseab.karnataka.gov.in/english
- Latest News ವಿಭಾಗದಲ್ಲಿ “Final Time Table for 2026 SSLC Exam-1” ಹಾಗೂ “Final Time Table for 2026 SSLC Exam-2” ಅಥವಾ “Final Time Table for 2026 PUC 2” ಎಂಬ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.
- ವೇಳಾಪಟ್ಟಿ ಪಿಡಿಎಫ್ ಅನ್ನು ವೀಕ್ಷಿಸಿ, ಡೌನ್‌ಲೋಡ್ ಅಥವಾ ಮುದ್ರಿಸಿ.
ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆ
- ನಿಗದಿತ ದಿನಾಂಕದಂತೆ ಸಿದ್ಧತೆ ಪ್ರಾರಂಭಿಸಿ.
- ಮಾದರಿ ಪ್ರಶ್ನಾಪತ್ರಿಕೆಗಳ ಅಧ್ಯಯನದ ಮೂಲಕ ಅಭ್ಯಾಸ ಹೆಚ್ಚಿಸಿ.
- ಅಧಿಕೃತ ಜಾಲತಾಣದಿಂದ ನವೀಕರಿತ ಮಾಹಿತಿಯನ್ನು ನಿರಂತರವಾಗಿ ಪರಿಶೀಲಿಸಿ.
2026 ನೇ ಸಾಲಿನ ಪರೀಕ್ಷೆಗಳು ಯಶಸ್ವಿಯಾಗಿ ಎದುರಿಸಲು ವಿದ್ಯಾರ್ಥಿಗಳು ಸಮಯದ ಸಾಧ್ಯವಾದಷ್ಟು ಸರಿಯಾದ ಉಪಯೋಗ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮತ್ತು ತ್ವರಿತ ಅಪ್‌ಡೇಟ್‌ಗಳಿಗಾಗಿ KSEAB ಅಧಿಕೃತ ಜಾಲತಾಣವನ್ನು ನೋಡಿರಿ.
| SSLC Exam 1 Time Table PDF | Click Here |
| SSLC Exam 2 Time Table PDF | Click Here |
| II PUC Exam 1 Time Table PDF | Click Here |
| II PUC Exam 2 Time Table PDF | Click Here |
| Official Website | Click Here |