ದೀಪಾವಳಿ ಹಬ್ಬಕ್ಕೆ ಬಂಪರ್​ ಆಫರ್ ಕೊಟ್ಟ BSNL​: ಕೇವಲ 1 ರೂ.ಗೆ ಸಿಗುತ್ತೆ 4G ಇಂಟರ್ನೆಟ್​!

Published On: October 20, 2025
Follow Us
bsnl-gives-1 rs-bumper-offer-for-diwali

ಬೆಳಕಿನ ಹಬ್ಬ ದೀಪಾವಳಿ ಎಂದರೆ ಭಾರತೀಯರಿಗೆ ವಿಶೇಷ, ಈ ಹಬ್ಬವು ದೇಶದಲ್ಲಿ ಹೊಸ ಹುರುಪು, ಸಂತೋಷ ಮತ್ತು ವ್ಯಾಪಾರಿಗಳಿಗೆ ಲಾಭದ ದಿನಗಳನ್ನು ತರುತ್ತವೆ. ಇಂತಹ ಹಬ್ಬದ ದಿನಕ್ಕೆ ವಿವಿಧ ಆಫರುಗಳು ಸಾಮಾನ್ಯ. ಅಂತೆಯೇ ದೇಶದ ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ಗ್ರಾಹಕರಿಗೆ ಅಚ್ಚರಿ ಮೂಡುವಂತೆ ಹೊಸ ಆಫರ್ ಒಂದನ್ನು ಘೋಷಿಸಿದೆ.

ದೇಶದಲ್ಲಿ ಹೊಸದಾಗಿ 4G ಸೇವೆಯನ್ನು ಆರಂಭಿಸಿರುವ BSNL ಕಂಪನಿ, ಹೊಸದಾಗಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕೇವಲ ರೂ. 1 ರ ಹೊಸ ಪ್ಲಾನ್ ಒಂದನ್ನು ಘೋಷಿಸಿದೆ. ಇದು 4G ಸೇವೆಯ ಇಂಟರ್ನೆಟ್ ಪ್ಯಾಕ್ ಆಗಿದ್ದು, ಒಂದು ತಿಂಗಳ ವೆಲಿಡಿಟಿ ಹೊಂದಿರಲಿದೆ.

ಇದನ್ನೂ ಓದಿ: South Western Railway Recruitment : ನಿವೃತ್ತ ಸಿಬ್ಬಂದಿಗೆ ಇಲ್ಲಿದೆ ಉದ್ಯೋಗಾವಕಾಶ ..! ಓದಿ ಸಂಪೂರ್ಣ ಮಾಹಿತಿ

BSNL ಆಫರ್‌ನ ವಿವರಗಳು

  • ದರ: 1 ರೂ. (ಟೋಕನ್ ಚಾರ್ಜ್ ಆಗಿ).
  • ಸಿಮ್ ಕಾರ್ಡ್: ಉಚಿತ ಪ್ರೀಪೇಯ್ಡ್ ಸಿಮ್ (ಹೊಸ ಗ್ರಾಹಕರಿಗೆ ಮಾತ್ರ).
  • ಸೇವೆಗಳು: ಎಲ್ಲಾ ನೆಟ್‌ವರ್ಕ್‌ಗಳಿಗೆ ದಿನಕ್ಕೆ 2GB 4G ಡೇಟಾ (2GB ಮೀರಿದರೆ 40kbps ವೇಗಕ್ಕೆ ಕಡಿಮೆಯಾಗುತ್ತದೆ).
  • ದಿನಕ್ಕೆ 100 SMSಗಳು.
  • ವ್ಯಾಲಿಡಿಟಿ: 30 ದಿನಗಳು.

ಆಫರ್ ಅವಧಿ ಎಷ್ಟು ದಿನಗಳು ?

ಭಾರತೀಯರ ನೆಚ್ಚಿನ BSNL ಕಂಪನಿ 4G ಸೇವೆಯನ್ನು ಪೂರೈಸುತ್ತಿದ್ದು, ತನ್ನೆಡೆಗೆ ಗ್ರಾಹಕರನ್ನು ಸೆಳೆಯಲು ಈ ಆಫರ್ ಹೊರತಂದಿದೆ. ಈ ಕೊಡುಗೆ ಅಕ್ಟೋಬರ್ 15, 2025 ರಿಂದ ನವೆಂಬರ್ 15, 2025 ರ ವರೆಗೆ ಮಾತ್ರ ಮಾನ್ಯವಾಗಿರಲಿದೆ. ಈ ಅವಧಿಯಲ್ಲಿ BSNL ಗೆ ಸೇರುವ ಚಂದಾದಾರರಿಗೆ ಕೇವಲ 1 ರೂ. ಟೋಕನ್ ಚಾರ್ಜ್ ಆಗಿ ಸ್ವೀಕರಿಸಲಾಗುತ್ತಿದೆ. ಈ ಕೊಡುಗೆಯ ಮೂಲಕ ಹೊಸ ಗ್ರಾಹಕರು ಒಂದು ತಿಂಗಳು 4G ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

BSNL ರೂ. 1 ಕೊಡುಗೆಯ ಲಾಭಗಳು

ದೀಪಾವಳಿಗೆ ಹೊಸದಾಗಿ ಸಿಮ್ ಖರೀದಿಸುವ ಗ್ರಾಹಕರಿಗೆ ರೂ. 1 ಟೋಕನ್ ಮನಿ ತೆಗೆದುಕೊಂಡು ಹಲವಾರು ಸೌಲಭ್ಯಗಳನನ್ನು ಕಂಪನಿಯು ಒದಗಿಸಲಿದೆ. ಈ ಪ್ರಯೋಜನಗಳು 30 ದಿನಗಳವರೆಗೆ ಯಾವುದೇ ಹೆಚ್ಚಿನ ಚಾರ್ಜ್ ಗಳಿಲ್ಲದೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಕಂಪನಿಯು ತಿಳಿಸಿದೆ. ಅವುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

  • ಉಚಿತ ಸಿಮ್ ಕಾರ್ಡ್ ವಿತರಣೆ
  • ಭಾರತದಾದ್ಯಂತ ಅನಿಯಮಿತ ಧ್ವನಿ ಕರೆಗಳು
  • ದಿನಕ್ಕೆ 2GB ಯಂತೆ ಹೈ-ಸ್ಪೀಡ್ 4G ಡೇಟಾ
  • ಪ್ರತಿದಿನ 100 ಉಚಿತ SMS ಸೌಲಭ್ಯ

ಇದನ್ನೂ ಓದಿ: HDFC Parivartan Scholarship: ಎಲ್ಲಾ ವಿದ್ಯಾರ್ಥಿಗಳಿಗೂ ಸಿಗುತ್ತೆ ರೂ.75000 ವರೆಗೆ ವಿದ್ಯಾರ್ಥಿವೇತನ!

ಈ ಕೊಡುಗೆ ಹೇಗೆ ಪಡೆಯುವುದು?

BSNL ಸ್ಟೋರ್ ಅಥವಾ ಅಧಿಕೃತ ಡೀಲರ್‌ಗಳಿಗೆ ಭೇಟಿ ನೀಡಿ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅಥವಾ ಇತರ ಗುರುತಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.

 

Mahesh Kumar M.

ಮಹೇಶ್ ಕುಮಾರ್ ಎಂ. ಅವರು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯ ಉದ್ಯೋಗ ನ್ಯೂಸ್ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ಇವರು ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

Join WhatsApp

Join Now

Join Telegram

Join Now

Leave a comment