ದೇಶದ ಹೆಮ್ಮೆಯ ಸರಕಾರಿ ಸಂಸ್ಥೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಅಧಿಕೃತ ಅಧಿಸೂಚನೆಯ ಮೂಲಕ ತಂತ್ರಜ್ಞ, ಎಂಜಿನಿಯರಿಂಗ್ ಸಹಾಯಕ ತರಬೇತಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ನವೆಂಬರ್ 04, 2025 ಒಳಗೆ ಅರ್ಜಿ ಸಲ್ಲಿಸಬಹುದು.
BEL ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ( BEL )
ಹುದ್ದೆಗಳ ಸಂಖ್ಯೆ: 162
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಯ ಹೆಸರು: ತಂತ್ರಜ್ಞ, ಎಂಜಿನಿಯರಿಂಗ್ ಸಹಾಯಕ ಶಿಕ್ಷಣಾರ್ಥಿ
ಸಂಬಳ: ತಿಂಗಳಿಗೆ ರೂ.21500-90000/-
ಇದನ್ನೂ ಓದಿರಿ: ವಿವಿಧ ಪ್ಯಾರಾ ಕಾನೂನು ಸ್ವಯಂಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ: 10 ನೇ ತರಗತಿ ಆದವರಿಗೆ ಅವಕಾಶ..!
BEL ಹುದ್ದೆಯ ಮತ್ತು ಸಂಬಳದ ವಿವರಗಳು
| ಪೋಸ್ಟ್ ಹೆಸರು | ಪೋಸ್ಟ್ ಗಳ ಸಂಖ್ಯೆ | ಸಂಬಳ (ತಿಂಗಳಿಗೆ) |
|---|---|---|
| ಎಂಜಿನಿಯರಿಂಗ್ ಸಹಾಯಕ ಶಿಕ್ಷಣಾರ್ಥಿ(ಇಎಟಿ) | 80 | ರೂ.24500-90000/- |
| ತಂತ್ರಜ್ಞ-ಸಿ | 82 | ರೂ.21500-82000/- |
ಶೈಕ್ಷಣಿಕ ಅರ್ಹತೆಯ ವಿವರಗಳು
| ಪೋಸ್ಟ್ ಹೆಸರು | ಅರ್ಹತೆ |
|---|---|
| ಎಂಜಿನಿಯರಿಂಗ್ ಸಹಾಯಕ ಶಿಕ್ಷಣಾರ್ಥಿ(ಇಎಟಿ) | ಎಂಜಿನಿಯರಿಂಗ್ ಡಿಪ್ಲೊಮಾ |
| ತಂತ್ರಜ್ಞ-ಸಿ | 10ನೇ ತರಗತಿ, ಐಟಿಐ |
ವಯೋಮಿತಿ
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01 ಅಕ್ಟೋಬರ್ 2025 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ
ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳು – 03 ವರ್ಷಗಳು
ಪ.ಜಾತಿ/ಪ.ಪಂಗಡ ಅಭ್ಯರ್ಥಿಗಳು – 05 ವರ್ಷಗಳು
ವಿಕಲಚೇತನ ಅಭ್ಯರ್ಥಿಗಳು – 10 ವರ್ಷಗಳು
ಅರ್ಜಿ ಶುಲ್ಕ
ಪ.ಜಾತಿ/ಪ.ಪಂಗಡ/ವಿಕಲಚೇತನ/ಮಾಜಿ ಸೈನಿಕರ ಅಭ್ಯರ್ಥಿಗಳು – ಯಾವುದೇ ಶುಲ್ಕ ಇರುವುದಿಲ್ಲ
ಸಾಮಾನ್ಯ/ಒಬಿಸಿ (ಎನ್‌ಸಿಎಲ್)/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು – ರೂ.590/-
ಪಾವತಿ ವಿಧಾನ – ಆನ್‌ಲೈನ್
ಆಯ್ಕೆ ಪ್ರಕ್ರಿಯೆ
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ದಾಖಲೆ ಪರಿಶೀಲನೆ
- ಸಂದರ್ಶನ
ಇದನ್ನೂ ಓದಿರಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಕ ಹುದ್ದೆಗಳ ನೇಮಕಾತಿ
BEL ನೇಮಕಾತಿ 2025 ಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲನೆಯದಾಗಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
- ಆನ್ ಲೈನ್ ಅರ್ಜಿ ಸಲ್ಲಿಸಲು ಲಿಂಕ್ ಕೆಳಗೆ ನೀಡಲಾಗಿದೆ ಕ್ಲಿಕ್ ಮಾಡಿ ಮತ್ತು Create Login ಮೇಲೆ ಕ್ಲಿಕ್ ಮಾಡಿ.
- ಹೆಸರು, ಹುಟ್ಟಿದ ದಿನಾಂಕ, ಇಮೇಲ್ ಐಡಿ ಹಾಕಿ ಖಾತೆ ತೆರೆಯಿರಿ ಮತ್ತು ಲಾಗಿನ್ ಆಗಿರಿ.
- ಬಿಇಎಲ್ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಪೂರೈಸಿರಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್‌ಲೋಡ್ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- ಅರ್ಜಿ ಭರ್ತಿ ಪೂರ್ಣಗೊಂಡ ನಂತರ ಎಲ್ಲ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಂಡು ಪ್ರಿಂಟ್ ತೆಗೆದುಕೊಳ್ಳಿ. ನಂತರ ಅಪ್ಲಿಕೇಶನ್ Submit ಮಾಡಿ ಮತ್ತು ಅಪ್ಲಿಕೇಶನ್ ಸಲ್ಲಿಕೆಯ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಅಕ್ಟೋಬರ್ 15, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 04, 2025
BEL ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: ಇಲ್ಲಿ ಕ್ಲಿಕ್ ಮಾಡಿ