ಭಾರತದ ಪ್ರಮುಖ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer – LBO) ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನ ಆರಂಭಿಸಲು ಆಸಕ್ತಿ ಹೊಂದಿರುವ ಪದವೀಧರರಿಗೆ ಇದು ಸುವರ್ಣಾವಕಾಶ. ಅರ್ಹ ಅಭ್ಯರ್ಥಿಗಳು ನವೆಂಬರ್ 23, 2025ರೊಳಗೆ IBPS ಅಧಿಕೃತ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಯ ವಿವರಗಳು
ಸಂಸ್ಥೆಯ ಹೆಸರು: ಪಂಜಾಬ್ ನ್ಯಾಷನಲ್ ಬ್ಯಾಂಕ್ ( PNB )
ಹುದ್ದೆಗಳ ಸಂಖ್ಯೆ: 750
ಹುದ್ದೆಯ ಸ್ಥಳ: ಅಖಿಲ ಭಾರತ
ಹುದ್ದೆಯ ಹೆಸರು: ಸ್ಥಳೀಯ ಬ್ಯಾಂಕ್ ಅಧಿಕಾರಿ
ಸಂಬಳ: ತಿಂಗಳಿಗೆ ರೂ. 48,480 – 85,920/-
ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ ಹುದ್ದೆಗಳ ವಿವರ (ರಾಜ್ಯವಾರು)
| ರಾಜ್ಯ | ಹುದ್ದೆಗಳ ಸಂಖ್ಯೆ |
|---|---|
| ಆಂಧ್ರಪ್ರದೇಶ | 05 |
| ಗುಜರಾತ್ | 95 |
| ಕರ್ನಾಟಕ | 85 |
| ಮಹಾರಾಷ್ಟ್ರ | 135 |
| ತೆಲಂಗಾಣ | 88 |
| ತಮಿಳುನಾಡು | 85 |
| ಪಶ್ಚಿಮ ಬಂಗಾಳ | 90 |
| ಜಮ್ಮು ಮತ್ತು ಕಾಶ್ಮೀರ | 20 |
| ಲಡಾಖ್ | 03 |
| ಈಶಾನ್ಯ ರಾಜ್ಯಗಳು (ಅರುಣಾಚಲ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಮ್, ನಾಗಲ್ಯಾಂಡ್, ಸಿಕ್ಕಿಂ, ತ್ರಿಪುರಾ) | 114 |
ಶೈಕ್ಷಣಿಕ ಅರ್ಹತೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ
- ಕನಿಷ್ಠ ವಯಸ್ಸು: 23 ವರ್ಷ
- ಗರಿಷ್ಠ ವಯಸ್ಸು: 30 ವರ್ಷ
ವಯೋಮಿತಿ ಸಡಿಲಿಕೆ
- OBC ವರ್ಗ: 3 ವರ್ಷ
- ಪ. ಜಾತಿ/ಪ. ಪಂಗಡ ಮತ್ತು ಮಾಜಿ ಸೈನಿಕರು: 5 ವರ್ಷ
- ವಿಕಲಚೇತನ ಅಭ್ಯರ್ಥಿಗಳು: 10 ವರ್ಷ
ಆಯ್ಕೆ ಪ್ರಕ್ರಿಯೆ
- ಆನ್‌ಲೈನ್ ಲಿಖಿತ ಪರೀಕ್ಷೆ (OWT)
- ದಾಖಲೆ ಪರಿಶೀಲನೆ
- ಸ್ಥಳೀಯ ಭಾಷಾ ನೈಪುಣ್ಯ ಪರೀಕ್ಷೆ
- ವೈಯಕ್ತಿಕ ಸಂದರ್ಶನ
- ವೈದ್ಯಕೀಯ ಪರೀಕ್ಷೆ
ವೇತನ ಮತ್ತು ಸೌಲಭ್ಯಗಳು
ಮೂಲ ವೇತನ ಶ್ರೇಣಿ: (48480–85920) ರೂ.ಗಳವರೆಗೆ. ಜೊತೆಗೇ DA, HRA, ವೈದ್ಯಕೀಯ ವಿಮೆ, ನಿವೃತ್ತಿ ಸೌಲಭ್ಯಗಳು, ಲೀಸ್ಡ್ ಅಕಾಮಡೇಷನ್, ರಜೆ ದರ ರಿಯಾಯಿತಿ ಸೇರಿದಂತೆ ವಿವಿಧ ಭತ್ಯೆಗಳು ಲಭ್ಯ.
ಅರ್ಜಿ ಶುಲ್ಕ
- ಸಾಮಾನ್ಯ, OBC, EWS ಅಭ್ಯರ್ಥಿಗಳಿಗೆ: ₹1180
- SC/ST ಹಾಗೂ PwBD ಅಭ್ಯರ್ಥಿಗಳಿಗೆ: ₹59
ಅರ್ಜಿ ಸಲ್ಲಿಸುವ ವಿಧಾನ
- IBPS ಅಧಿಕೃತ ಜಾಲತಾಣ https://ibpsreg.ibps.in/pnboct25 ಗೆ ಭೇಟಿ ನೀಡಿ.
- ಹೊಸ ಅಭ್ಯರ್ಥಿಗಳು ಹೊಸದಾಗಿ ನೋಂದಣಿ ಮಾಡಿಕೊಳ್ಳಿ.
- ಲಾಗಿನ್ ಮಾಡಿ PNB Local Bank Officer Recruitment 2025 ಆಯ್ಕೆಮಾಡಿ.
- ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ನಮೂದಿಸಿ, ಅಗತ್ಯ ದಾಖಲೆಗಳು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿಯನ್ನು ಪರಿಶೀಲಿಸಿ, ಸಲ್ಲಿಸಿ ಮತ್ತು ಪ್ರಿಂಟ್ ಔಟ್ ಸೇವ್ ಮಾಡಿ.
ಪ್ರಮುಖ ಅಂಶಗಳು
- ದೇಶಾದ್ಯಂತ 17 ರಾಜ್ಯಗಳಲ್ಲಿ ಹುದ್ದೆಗಳು ಲಭ್ಯ.
- ಪರೀಕ್ಷೆ ಡಿಸೆಂಬರ್ 2025 ಅಥವಾ ಜನವರಿ 2026ರಲ್ಲಿ ನಿರೀಕ್ಷೆ.
- ಬ್ಯಾಂಕಿಂಗ್ ವಲಯದಲ್ಲಿ ಸರ್ಕಾರಿ ನೌಕರಿ ಹುಡುಕುವವರಿಗೆ ಇದು ಅತ್ಯುತ್ತಮ ಅವಕಾಶ.
ಪ್ರಮುಖ ದಿನಾಂಕಗಳು
- ಪ್ರಕಟಣೆ ದಿನಾಂಕ – ನವೆಂಬರ್ 03, 2025
- ಅರ್ಜಿ ಪ್ರಾರಂಭ – ನವೆಂಬರ್ 03, 2025
- ಕೊನೆಯ ದಿನಾಂಕ – ನವೆಂಬರ್ 23, 2025
- ಆನ್‌ಲೈನ್ ಪರೀಕ್ಷೆ (ತಾತ್ಕಾಲಿಕ) – ಡಿಸೆಂಬರ್ 2025 / ಜನವರಿ 2026
ಪ್ರಮುಖ ಲಿಂಕುಗಳು
| ಅಧಿಕೃತ ಅಧಿಸೂಚನೆ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
| ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಉದ್ಯೋಗ ಸುದ್ದಿ ಓದಲು | ಇಲ್ಲಿ ಕ್ಲಿಕ್ ಮಾಡಿ |