ಕರ್ನಾಟಕದ ವಿದ್ಯಾರ್ಥಿಗಳೆ ನಾವಿವತ್ತು ಮತ್ತೊಂದು ವಿದ್ಯಾರ್ಥಿವೇತನದ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಫೆಡರಲ್ ಬ್ಯಾಂಕ್ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನವು 2025-26 ರ ಶೈಕ್ಷಣಿಕ ವರ್ಷಕ್ಕೆ ನೂತನ ವಿದ್ಯಾರ್ಥಿವೇತನ ಯೋಜನೆ ಪ್ರಕಟಿಸಿದೆ. ಬ್ಯಾಂಕಿನ ಸಂಸ್ಥಾಪಕ ಶ್ರೀ ಕೆ.ಪಿ. ಹಾರ್ಮಿಸ್ ಅವರ ಸ್ಮರಣಾರ್ಥ ಈ ವಿಶೇಷ ವೇತನ ಯೋಜನೆ ನೀಡಲಾಗುತ್ತಿದೆ.
ಈ ಯೋಜನೆಯ ಉದ್ದೇಶ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ಜೊತೆಗೆ ತಂತ್ರಜ್ಞಾನ ಸೌಲಭ್ಯ ಒದಗಿಸಿ ಅವರ ಶಿಕ್ಷಣ ಯಾತ್ರೆಯನ್ನು ಮತ್ತಷ್ಟು ಬಲಪಡಿಸುವುದು.
Federal Bank Scholarship ಗೆ ಯಾರು ಅರ್ಜಿ ಸಲ್ಲಿಸಬಹುದು?
- MBBS, BDS, BVSc, BE/B.Tech, B.Sc ನರ್ಸಿಂಗ್, B.Sc ಕೃಷಿ, MBA/PGDM ಮೊದಲ ವರ್ಷದ ವಿದ್ಯಾರ್ಥಿಗಳು
- ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಕೇರಳ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣದ ವಿದ್ಯಾರ್ಥಿಗಳು
- ಸೇನಾ ಕುಟುಂಬದ ಅವಲಂಬಿತರು ಹಾಗೂ ದೃಷ್ಟಿ, ವಾಕ್ ಅಥವಾ ಶ್ರವಣ ದೋಷ ಹೊಂದಿರುವ ವಿದ್ಯಾರ್ಥಿಗಳು ಸಹ ಅರ್ಹರು
ಇದನ್ನೂ ಓದಿರಿ: Chaff Cutter Subsidy: ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ಖರೀದಿಗೆ ಅರ್ಜಿ ಆಹ್ವಾನ !
ವಿದ್ಯಾರ್ಥಿವೇತನದ ಪ್ರಮುಖ ಪ್ರಯೋಜನಗಳು
- ವರ್ಷಕ್ಕೆ ಗರಿಷ್ಠ ಒಂದು ಲಕ್ಷ ರೂಪಾಯಿವರೆಗೆ ಟ್ಯೂಷನ್ ಮತ್ತು ಶೈಕ್ಷಣಿಕ ವೆಚ್ಚಗಳ 100% ಮರುಪಾವತಿ
- ಲ್ಯಾಪ್ಟಾಪ್ ಖರೀದಿ ಖರ್ಚಿಗೆ 40,000 ರೂ ಅಥವಾ ಟ್ಯಾಬ್ಲೆಟ್‌ಗೆ 30,000 ರೂ ವರೆಗೆ ಮರುಪಾವತಿ (ಒಟ್ಟು ಮಿತಿ: 1 ಲಕ್ಷ ರೂ)
ಅರ್ಜಿ ಸಲ್ಲಿಸುವ ವಿಧಾನ
ಫೆಡರಲ್ ಬ್ಯಾಂಕ್ (Federal Bank Scholarship) ವಿದ್ಯಾರ್ಥಿವೇತನಕ್ಕಾಗಿ ಈ ಕೆಳಗಿನ ಲಿಂಕ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು –https://scholarships.federalbank.co.in:6443/fedschlrshipportal/
ಆಯ್ಕೆ ಪ್ರಕ್ರಿಯೆ ಮೆರಿಟ್ ಹಾಗೂ ಅರ್ಹತೆಯ ಆಧಾರದ ಮೇಲೆ ನಡೆಯಲಿದೆ.
ಕೊನೆಯ ದಿನಾಂಕ
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 30, 2025.
ಈ ವಿದ್ಯಾರ್ಥಿವೇತನವು ಕೇವಲ ಆರ್ಥಿಕ ಸಹಾಯವಲ್ಲ — ಅದು ನಿಮ್ಮ ಶಿಕ್ಷಣ ಕನಸಿಗೆ ಬಲ ನೀಡುವ ಅವಕಾಶ. ಆದ್ದರಿಂದ, ಅರ್ಹ ವಿದ್ಯಾರ್ಥಿಗಳು ತಡಮಾಡದೆ ಇಂದುಲೇ ಅರ್ಜಿ ಸಲ್ಲಿಸಿ !
Are b. Ed students eligible?