ಕರ್ನಾಟಕ ರಾಜ್ಯ ಸರ್ಕಾರ ಶ್ರಮ ಶಕ್ತಿ ಯೋಜನೆಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಉದ್ಯಮಿಗಳಿಗೆ ಆರ್ಥಿಕ ನೆರವು ಹಾಗೂ ಕೌಶಲ್ಯ ತರಬೇತಿ ನೀಡುವ ಉದ್ದೇಶ ಹೊಂದಿದೆ.
ಏನಿದು ಶ್ರಮ ಶಕ್ತಿ ಯೋಜನೆ?
ಕರ್ನಾಟಕ ರಾಜ್ಯ ಸರ್ಕಾರ ಶ್ರಮ ಶಕ್ತಿ ಯೋಜನೆಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ,50,000 ವರೆಗೆ ಸಾಲ ನೀಡುವ ಯೋಜನೆ ರೂಪಿಸಲಾಗಿದೆ.
ಪ್ರಮುಖ ವಿಷಯಗಳು
50000 ವರೆಗೆ ಶೇಕಡ 4% ಬಡ್ಡಿ ದರದಲ್ಲಿ 36 ಕಂತುಗಳಲ್ಲಿ ಪಾವತಿಸುವ ಯೋಜನೆ ಇದಾಗಿದ್ದು 36 ಕಂತುಗಳಲ್ಲಿ ಪಾವತಿಸಿದರೆ ಇನ್ನುಳಿದ 50% ಮೊತ್ತವನ್ನು ಬ್ಯಾಕ್ ಎಂಡ್ ಸಬ್ಸಿಡಿ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿರಿ: PGCIL ನೇಮಕಾತಿ: ಕಂಪನಿ ಕಾರ್ಯದರ್ಶಿ ವೃತ್ತಿಪರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ಯೋಜನೆ ಪಡೆಯಲು ಅರ್ಹತೆ ಏನು?
- ಅರ್ಜಿ ದಾರರು ಮೇಲೆ ತಿಳಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರಾಗಿರಬೇಕು .
- ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳು ಆಗಿರಬೇಕು.
- ಅರ್ಜಿ ದಾರರ ವಯಸ್ಸು 18 ರಿಂದ 55 ವರ್ಷದ ಒಳಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ ವರ್ಷಕ್ಕೆ ₹350000 ಒಳಗಿರಬೇಕು.
- ಇನ್ನಿತರ ಯಾವುದೇ ಯೋಜನೆ ಯಲ್ಲಿ ಸಾಲ ಪಡೆವರಾಗಿರಬಾರದು.
ಅಗತ್ಯ ದಾಖಲೆಗಳು
- ಯೋಜನಾ ವರದಿ.
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ.
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ.
- ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
- ಬ್ಯಾಂಕ್ ಪಾಸ್ ಬುಕ್ ಪ್ರತಿ.
- ಸ್ವಯಂ ಘೋಷಣೆ ಪತ್ರ.
- ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ.
ಹೆಚ್ಚಿನ ಮಾಹಿತಿಗೆ ಇವರನ್ನು ಸಂಪರ್ಕಿಸಿ
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ವಟ್ಸಾಪ್ ಸಹಾಯವಾಣಿ ಸಂಖ್ಯೆ : 08277799990.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಸಹಾಯವಾಣಿ ಸಂಖ್ಯೆ : 080-22860999.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಲಿಮಿಟೆಡ್ ಹೆಲ್ಸ್ ಡೆಸ್ಕ್ ಇಮೇಲ್ :- info.kmdc@karnataka.gov.in. / kmdc.ho.info@karnataka.gov.in