ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ತಿಳಿಸುವ 7 ಪ್ರಮುಖ ಲಕ್ಷಣಗಳು ಮತ್ತು ನೀವು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಮಾಹಿತಿ ಇಲ್ಲಿದೆ

Published On: November 10, 2025
Follow Us
ಫೋನ್ ಹ್ಯಾಕ್

ಇತ್ತೀಚಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಈ ಸೌಕರ್ಯ ಹ್ಯಾಕರ್‌ಗಳಿಗೆ ಬಾಗಿಲು ತೆರೆಯುವಂತಾಗಿದೆ. ಪ್ರತಿನಿತ್ಯ ನಾವು ಬ್ಯಾಂಕಿಂಗ್ ಮಾಹಿತಿಗಳನ್ನು ಮೆಸೇಜಿಂಗ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ಈ ಮಾಹಿತಿಗಳು ಹ್ಯಾಕರ್‌ಗಳಿಗೆ ದೊರೆತಾಗ ನಮ್ಮ ಖಾಸಗಿತನ ಸವಾಲಿಗೆ ಸಿಲುಕುತ್ತವೆ. ಹಾಗಾದರೆ, ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಎಂಬುದನ್ನು ಹೇಗೆ ಗುರುತಿಸಬಹುದು? ಈ ಕುರಿತು ನೀವು ಗಮನಿಸಬೇಕಾದ 7 ಪ್ರಮುಖ ಲಕ್ಷಣಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ ಸಂಪೂರ್ಣವಾಗಿ ಓದಿರಿ.

ಬ್ಯಾಟರಿ ಅನಿರೀಕ್ಷಿತವಾಗಿ ಖಾಲಿಯಾಗುವುದು

ನಿಮ್ಮ ಫೋನ್ ಬ್ಯಾಟರಿ ಸ್ವಪ್ಲ ಬಳಸಿದ ಕೂಡಲೇ ಪದೇ ಪದೆ ಖಾಲಿಯಾಗುತ್ತಿದ್ದರೆ, ಹಿನ್ನೆಲೆಯಲ್ಲಿರುವ ಅಪರಿಚಿತ ಅಪ್ಲಿಕೇಶನ್ ನಿಮ್ಮ ಡಿವೈಸ್‌ನ ಶಕ್ತಿಯನ್ನು ಹೀರಿಕೊಳ್ಳುತ್ತಿದ್ದಿರಬಹುದು. ಇದು ಮಾಲ್‌ವೇರ್ ಅಥವಾ ಸ್ಪೈವೇರ್‌ನ ಎಚ್ಚರಿಕೆಯ ಸೂಚನೆಯಾಗಿರಬಹುದು. ಈ ಸಮಸ್ಯೆ ಜೊತೆಗೆ ಕೆಳಗಿನ ಎಲ್ಲ ಪರಿಸ್ಥಿತಿಗಳು ಹೋಲಿಕೆಯಾಗುತ್ತಿದ್ದರೆ ನೀವು ಎಚ್ಚೆತ್ತುಕೊಳ್ಳುವುದು ಅಗತ್ಯ.

ಇದನ್ನೂ ಓದಿರಿ: NABFINSನಲ್ಲಿ ವಿವಿಧ ಗ್ರಾಹಕ ಸೇವಾ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನಿಮ್ಮ ಫೋನ್ ಅತಿಯಾಗಿ ಬಿಸಿಯಾಗುತ್ತಿದೆಯೇ?

ನಿಮ್ಮ ಫೋನ್ ಬಳಕೆಯಿಲ್ಲದಿದ್ದರೂ ಫೋನ್ ಬಿಸಿಯಾಗುತ್ತಿದ್ದರೆ, ಹ್ಯಾಕರ್‌ಗಳು ನಿಮ್ಮ ಸಾಧನದ ಪ್ರೊಸೆಸರ್‌ನ್ನು ದುರುಪಯೋಗ ಪಡಿಸುತ್ತಿರುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ ನೀವು ಎಚ್ಚರಿಕೆ ವಹಿಸುವುದು ಅವಶ್ಯವಾಗಿದೆ.

ಫೋನ್ ವೇಗ ಕಡಿಮೆಯಾಗುವುದು

ಹಿಂದಿನಂತೆ ಫೋನ್ ಸ್ಮೂತ್ ಆಗಿ ಕೆಲಸ ಮಾಡದಿದ್ದರೆ ಅಥವಾ ಹ್ಯಾಂಗ್ ಆಗುತ್ತಿದ್ದರೆ, ಮಾಲ್‌ವೇರ್ ಅಂಶಗಳು ಸಿಸ್ಟಮ್ ಸಂಪನ್ಮೂಲಗಳನ್ನು ನುಂಗುತ್ತಿದ್ದಿರಬಹುದು. ಈ ಸಮಸ್ಯೆಗೆ ತುತ್ತಾಗಿದ್ದರೆ ಇದ್ದಕ್ಕಿದ್ದತೆ ನಿಮ್ಮ ಫೋನ್ ನಿಧಾನವಾಗಲು ಆರಂಭವಾಗಿರುವುದನ್ನು ನೀವು ಗಮನಿಸಿರುತ್ತೀರಿ.

ಆಪ್‌ಗಳು ಪದೇಪದೇ ಕ್ರ್ಯಾಶ್ ಆಗುವುದು

ಆಪ್‌ಗಳು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತಿದ್ದರೆ ಅಥವಾ ಸ್ಥಗಿತಗೊಳ್ಳುತ್ತಿದ್ದರೆ, ಇದು ನಿಮ್ಮ ಫೋನ್‌ನಿಗೆ ಹೊರಗಿನ ಹಸ್ತಕ್ಷೇಪ ಇರಬಹುದಾದ ಸ್ಪಷ್ಟ ಸೂಚನೆ.

ವಿಚಿತ್ರ ನೋಟಿಫಿಕೇಶನ್‌ಗಳು ಅಥವಾ ಪಾಪ್-ಅಪ್‌ಗಳು

ಅಪರೂಪದ ನೋಟಿಫಿಕೇಶನ್‌ಗಳು, ನಕಲಿ ವೈರಸ್ ಅಲರ್ಟ್‌ಗಳು ಅಥವಾ ಅಪರಿಚಿತ ಲಿಂಕ್‌ಗಳು ಕಾಣಿಸಿಕೊಂಡರೆ, ನಿಮ್ಮ ಸಾಧನದಲ್ಲಿ ದುರುದ್ದೇಶಪೂರಿತ ಆಪ್ ಕಾರ್ಯನಿರ್ವಹಿಸುತ್ತಿರಬಹುದು.

ಸ್ಕ್ರೀನ್ ಮಿಟುಕಿಸುವಿಕೆ ಅಥವಾ ಸ್ವಯಂ ಕಾರ್ಯಗಳು

ಫೋನ್ ಪರದೆ ಹಠಾತ್ ಮಿಟುಕಿಸುತ್ತಿದ್ದರೆ ಅಥವಾ ಆಪ್‌ಗಳು ಸ್ವತಃ ತೆರೆಯುತ್ತಿದ್ದರೆ, ಅದು ದೂರದಿಂದ ನಿಯಂತ್ರಣದ ಸೂಚನೆ ಆಗಬಹುದು. ಇದ್ದಕ್ಕಿದ್ದಂತೆ ತೆರೆದುಕೊಂಡಿರುವ ಆಫ್ ಗಳು ಬಂದಾಗುತ್ತಿದ್ದರೆ ಇವು ಸಹ ನಿಮಗೆ ಮುನ್ನೆಚ್ಚರಿಕೆಯನ್ನು ನೀಡುತ್ತಿರಬಹುದು.

ಇದನ್ನೂ ಓದಿರಿ: Rolls-Royce Wings4Her Scholarship: ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರೋಲ್ಸ್ ರಾಯ್ಸ್ ವಿಂಗ್ಸ್ ವಿದ್ಯಾರ್ಥಿವೇತನ

ಡೇಟಾ ಅನಿರೀಕ್ಷಿತವಾಗಿ ಖಾಲಿಯಾಗುವುದು

ಸಾಮಾನ್ಯ ಬಳಕೆಯಲ್ಲಿಯೂ ಡೇಟಾ ವೇಗವಾಗಿ ಕೊನೆಗೊಳ್ಳುತ್ತಿದ್ದರೆ, ಅಪಾಯಕಾರಿ ಅಪ್ಲಿಕೇಶನ್‌ಗಳು ನಿಮ್ಮ ಮಾಹಿತಿಯನ್ನು ಬೇರೆಲ್ಲಿಗೋ ರವಾನಿಸುತ್ತಿರುವ ಮುನ್ಸೂಚನೆಯಾಗಿರುತ್ತದೆ.

ನಿಮ್ಮ ಸುರಕ್ಷತೆಯ ಪರಿಗಣನೆ

  • ಅನಗತ್ಯ ಅಥವಾ ಗುರುತಿಸದ ಆಪ್‌ಗಳನ್ನು ಅಳಿಸಿ.
  • ಕೇವಲ ಅಧಿಕೃತ ಆಪ್ ಸ್ಟೋರ್‌ಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿ.
  • ವಿಶ್ವಾಸಾರ್ಹ ಆಂಟಿವೈರಸ್ ಉಪಯೋಗಿಸಿ ಮತ್ತು ನಿತ್ಯ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ನಿರ್ಲಕ್ಷಿಸದೆ ಮಾಡಿ.

ಸ್ಮಾರ್ಟ್‌ಫೋನ್‌ನಲ್ಲಿ ನಡೆಯುವ ಪುಟ್ಟ ಬದಲಾವಣೆಗಳನ್ನೂ ನಿರ್ಲಕ್ಷಿಸಬೇಡಿ. ಅವು ಹ್ಯಾಕಿಂಗ್‌ನ ದೊಡ್ಡ ಅಪಾಯವನ್ನು ಮುಂಚಿತವಾಗಿ ಎಚ್ಚರಿಸುತ್ತವೆ. ಅಲ್ಲದೇ ಯಾವುದೊ ಆಫರ್, ಇನ್ಯಾವುದೋ ಲಾಭದ ಆಸೆ ತೋರಿಸಿ ನಿಮ್ಮನ್ನು ವಂಚಿಸಲು ಹ್ಯಾಕರ್ ಗಳು ಕಾದಿರುತ್ತಾರೆ. ಅಲ್ಲದೇ ಅಪರಿಚಿತ ಲಿಂಕುಗಳನ್ನು ಕಳುಹಿಸಿ ಕ್ಲಿಕ್ ಮಾಡುವತೆ ಹೇಳಬಹುದು. ಇಂತಹವುಗಳಿಂದ ಜಾಗರೂಕರಾಗಿರಿ, ಸುರಕ್ಷಿತವಾಗಿರಿ!

Mahesh Kumar M.

ಮಹೇಶ್ ಕುಮಾರ್ ಎಂ. ಅವರು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯ ಉದ್ಯೋಗ ನ್ಯೂಸ್ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ಇವರು ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

Join WhatsApp

Join Now

Join Telegram

Join Now

Leave a comment