ಎಚ್ಚರಿಕೆ: ದೇಶದ ಲಕ್ಷಾಂತರ ಆಂಡ್ರಾಯ್ಡ್ಸಮೊಬೈಲ್ ಇದ್ದವರಿಗೆ ಸರ್ಕಾರದಿಂದ ಹೈ ಅಲರ್ಟ್, ಫೋನ್ ಹ್ಯಾಕ್ ಸಾಧ್ಯತೆ

Published On: November 13, 2025
Follow Us
government-issues-high-alert-to-millions-of-android-mobile-phone-users

ದೇಶದ ಲಕ್ಷಾಂತರ ಆಂಡ್ರಾಯ್ಡ್ಸಮೊಬೈಲ್ ಬಳಕೆದಾರರಿಗೆ ಸೈಬರ್ ಶಾಕ್! ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆ CERT-In (Indian Computer Emergency Response Team) ಇದೀಗ ತುರ್ತು ಎಚ್ಚರಿಕೆ ನೀಡಿದೆ. ಕಾರಣ – ಹೊಸ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಪತ್ತೆಯಾದ ಗಂಭೀರ ಸೈಬರ್ ದುರ್ಬಲತೆಗಳು. ಹೌದು, ಹ್ಯಾಕರ್‌ಗಳು ನಿಮ್ಮ ಫೋನ್‌ನ ಸಂಪೂರ್ಣ ನಿಯಂತ್ರಣ ಪಡೆಯುವಷ್ಟು ಅಪಾಯದ ಸ್ಥಿತಿ ನಿರ್ಮಾಣವಾಗಿದೆ!

CERT-In ಬಿಡುಗಡೆ ಮಾಡಿದ CIVN-2025-0293 ವರದಿಯ ಪ್ರಕಾರ, ಈ ದುರ್ಬಲತೆಗಳು ಆಂಡ್ರಾಯ್ಡ್ 13 ಹಾಗೂ ಅದರ ಮೇಲಿನ ಆವೃತ್ತಿಗಳಲ್ಲಿ ಕಂಡುಬಂದಿವೆ. ಅಂದರೆ, ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ Samsung, OnePlus, Vivo, Oppo, Xiaomi, Realme ಮತ್ತು Motorola ಹೀಗೆ ಎಲ್ಲ ಬ್ರ್ಯಾಂಡ್‌ಗಳ ಫೋನ್‌ಗಳು ಅಪಾಯದಲ್ಲಿವೆ.

Samsung, OnePlus, Realme, Redmi/Xiaomi, Oppo, Vivo, Motorola ಈ ಫೋನುಗಳಲ್ಲಿ ಬಳಸಲ್ಪಡುವ Qualcomm, MediaTek, Broadcom, ಮತ್ತು Unisoc ಚಿಪ್‌ಗಳಲ್ಲಿಯೇ ಸೈಬರ್ ದುರ್ಬಲತೆ ಪತ್ತೆಯಾಗಿದೆ.

ಇದನ್ನೂ ಓದಿರಿ: Sarojini Damodaran Scholarship: ಪದವಿ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಹ್ಯಾಕರ್‌ಗಳು ಏನು ಮಾಡಬಹುದು?

  • ನಿಮ್ಮ ಫೋನ್‌ನ ಸಂಪೂರ್ಣ ನಿಯಂತ್ರಣ ಪಡೆಯಬಹುದು
  • ವೈಯಕ್ತಿಕ ಫೋಟೋಗಳು, ವಾಟ್ಸಾಪ್ ಮೆಸೇಜ್‌ಗಳು, ಬ್ಯಾಂಕ್ ವಿವರಗಳು ಸೇರಿದಂತೆ ಮಹತ್ವದ ಡೇಟಾ ಕದಿಯಬಹುದು
  • ದುಷ್ಟ ಕೋಡ್ ಅಥವಾ ಮಲ್‌ವೇರ್ ಇನ್‌ಸ್ಟಾಲ್ ಮಾಡಿ ಫೋನ್ ಹಾಳುಮಾಡಬಹುದು
  • ಕ್ಯಾಮೆರಾ ಮತ್ತು ಮೈಕ್ರೋಫೋನ್ ಹ್ಯಾಕ್ ಮಾಡಿ ನಿಮ್ಮ ಗೌಪ್ಯತೆ ಉಲ್ಲಂಘಿಸಬಹುದು

CERT-In ಈ ಬೆದರಿಕೆಯನ್ನು “High Risk” ವಿಭಾಗಕ್ಕೆ ಸೇರಿಸಿದೆ, ಅಂದರೆ ಇದು ಅತ್ಯಂತ ಗಂಭೀರ ಮಟ್ಟದ ಎಚ್ಚರಿಕೆ.

ಕೇವಲ ಫೋನ್ ಅಲ್ಲ — ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಟಿವಿಗೂ ಅಪಾಯ!

ಗೂಗಲ್‌ನ ನವೆಂಬರ್ 2025ರ Android Security Bulletin ಪ್ರಕಾರ, ಈ ದುರ್ಬಲತೆಗಳು ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಸೀಮಿತವಲ್ಲ. ಅದೇ ಚಿಪ್‌ಗಳನ್ನು ಬಳಸಿರುವ ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್ ಟಿವಿಗಳು ಸಹ ಅಪಾಯದಲ್ಲಿವೆ. ಹೀಗಾಗಿ ಹ್ಯಾಕರ್‌ಗಳು ಕೇವಲ ನಿಮ್ಮ ಫೋನ್ ಮಾತ್ರವಲ್ಲ, ಮನೆಯ ಇತರೆ ಸ್ಮಾರ್ಟ್ ಸಾಧನಗಳಿಗೂ ಪ್ರವೇಶ ಪಡೆಯಬಹುದು.

ಇದನ್ನೂ ಓದಿರಿ: HAL India Recruitment: ವಿಸಿಟಿಂಗ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಿಮ್ಮ ಫೋನ್‌ನ್ನು ಸುರಕ್ಷಿತವಾಗಿಡಲು ಮಾಡಬೇಕಾದ ಕ್ರಮಗಳು

  • oftware update ತಕ್ಷಣ ಮಾಡಿ – Android Security Patch ಲಭ್ಯವಿದ್ದರೆ ತಕ್ಷಣ ಇನ್‌ಸ್ಟಾಲ್ ಮಾಡಿ.
  • ಅಪರಿಚಿತ ಆಪ್ಸ್‌ಗಳನ್ನ ಫೋನಿಗೆ ಸೇರಿಸಿಕೊಳ್ಳಬೇಡಿ – Google Play Store ಹೊರತುಪಡಿಸಿ ಬೇರೆ ವೆಬ್‌ಸೈಟ್‌ಗಳಿಂದ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.
  • ಎಂಟಿ ವೈರಸ್ ಅಥವಾ ಮೊಬೈಲ್ ಸೆಕ್ಯೂರಿಟಿ ಆ್ಯಪ್ ಬಳಸಿ – ವಿಶ್ವಾಸಾರ್ಹ ಆ್ಯಪ್‌ಗಳ ಮೂಲಕ ನಿಯಮಿತ ಸ್ಕ್ಯಾನ್ ಮಾಡಿ.
  • Public Wi-Fi ಮೂಲಕ ಬ್ಯಾಂಕಿಂಗ್ ಕಾರ್ಯ ಬೇಡ – ಸಾರ್ವಜನಿಕ ನೆಟ್‌ವರ್ಕ್‌ಗಳು ಹ್ಯಾಕಿಂಗ್‌ಗೆ ಸುಲಭವಿದೆ.
  • ಹಳೆಯ ಫೋನ್‌ಗಳ ಬಳಕೆ ನಿಲ್ಲಿಸಿ – ಉತ್ಪಾದಕರು ಸೆಕ್ಯೂರಿಟಿ ಅಪ್ಡೇಟ್ ನೀಡದ ಸಾಧನಗಳನ್ನು ಬಿಟ್ಟು ಹೊಸದನ್ನು ಬಳಸುವುದು ಉತ್ತಮ.

ಸುರಕ್ಷೆ ನಿಮ್ಮ ಕೈಯಲ್ಲಿದೆ

ಸೈಬರ್ ಅಪಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಒಂದು ಸಣ್ಣ ನಿರ್ಲಕ್ಷ್ಯ — ಅಸುರಕ್ಷಿತ ಲಿಂಕ್ ಕ್ಲಿಕ್ ಮಾಡುವುದು, ಅಪರಿಚಿತ ಆ್ಯಪ್ ಇನ್‌ಸ್ಟಾಲ್ ಮಾಡುವುದು ಅಥವಾ ಅಪ್ಡೇಟ್ ಮಾಡದೆ ಬಿಟ್ಟುಬಿಡುವುದು — ನಿಮ್ಮ ವೈಯಕ್ತಿಕ ಮಾಹಿತಿ ಹ್ಯಾಕರ್‌ಗಳ ಕೈಗೆ ಹೋಗಲು ಸಾಕು.

ಆದ್ದರಿಂದ ಯಾವತ್ತೂ ಗಮನದಲ್ಲಿಡಿ: update, protect, backup — ಇವೇ ಮೂರು ಸುಲಭ ಹಂತಗಳು ನಿಮ್ಮ ಫೋನ್ ಸುರಕ್ಷಿತವಾಗಿಡುವ ಅಸ್ತ್ರಗಳು.

Mahesh Kumar M.

ಮಹೇಶ್ ಕುಮಾರ್ ಎಂ. ಅವರು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯ ಉದ್ಯೋಗ ನ್ಯೂಸ್ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ಇವರು ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

Join WhatsApp

Join Now

Join Telegram

Join Now

Leave a comment