ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನ 2025-26 –
2025-26 ನೇ ಸಾಲಿನ ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ (Azim Premji Scholarship), ಅರ್ಹವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹30,000 ವಾರ್ಷಿಕ ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದ ಅಜೀಂ ಪ್ರೇಮ್‌ಜಿ ತಮ್ಮ ಅಪಾರವಾದ ಸಂಪತ್ತಿನ ಬಹುಭಾಗವನ್ನು ಶಿಕ್ಷಣದ ಅಭಿವೃದ್ಧಿಗೆ ಮೀಸಲು ಮಾಡಿದ್ದು, ಆರ್ಥಿಕ ಸಂಕಷ್ಟದ ನಡುವೆಯೂ ಉತ್ತಮ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ನೆರವಾಗಲು ಈ ಕ್ರಮವನ್ನು ಕೈಗೊಂಡಿದ್ದಾರೆ.
ಈ ವಿದ್ಯಾರ್ಥಿವೇತನದ ಮುಖ್ಯ ಉದ್ದೇಶಗಳು
✔️ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೇರಿ ಅವರ ಮುಂದಿನ ಶಿಕ್ಷಣಕ್ಕೆ ಸಹಾಯ ಮಾಡುವುದು.
ಶಿಕ್ಷಣ ಕ್ಷೇತ್ರದಲ್ಲಿ ಭವಿಷ್ಯತಕ್ಕೆ ಉತ್ತಮ ಅವಕಾಶಗಳನ್ನು ಸೃಷ್ಟಿಸುವುದು.
✔️ ಗ್ರಾಮೀಣ ಮತ್ತು ದುರ್ಬಲ ಪ್ರದೇಶಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
✅ ಅಭ್ಯರ್ಥಿಯು ಭಾರತದ ನಾಗರಿಕ/ಖಾಯಂ ನಿವಾಸಿಯಾಗಿರಬೇಕು.
✅ 10 ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
✅ 2025-26ನೇ ಶೈಕ್ಷಣಿಕ ವರ್ಷಕ್ಕೆ ಮೊದಲ ಬಾರಿಗೆ ಯಾವುದೇ ಮಾನ್ಯತೆ ಪಡೆದ ಸರ್ಕಾರಿ/ಖಾಸಗಿ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ಡಿಪ್ಲೊಮಾ ಕೋರ್ಸ್-ಗೆ ಪ್ರವೇಶ ಪಡೆದಿರಬೇಕು.
North South Foundation (NSF) Scholarship 2025-26
https://udyoganews.com/central-jobs/north-south-foundation-nsf-scholarship-2025-26/
✅ ಕೋರ್ಸ್ ಅವಧಿ 2 ರಿಂದ 5 ವರ್ಷಗಳ ನಡುವೆ ಇರಬೇಕು.
✅ ಪದವಿ/ಡಿಪ್ಲೊಮಾ ಕೋರ್ಸ್-ನಲ್ಲಿ ನಿಯಮಿತ (Regular) ವಿದ್ಯಾರ್ಥಿಯಾಗಿ ದಾಖಲಾ ಪಡೆದಿರಬೇಕು
ವಿದ್ಯಾರ್ಥಿವೇತನದ ಮೊತ್ತ & ಅವಧಿ
✅ ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ವರ್ಷಕ್ಕೆ ₹30,000 ನೀಡಲಾಗುತ್ತದೆ.
✅ ಈ ವಿದ್ಯಾರ್ಥಿವೇತನವನ್ನು ಅವರು ಕೋರ್ಸ್ ಪೂರ್ಣಗೊಳ್ಳುವವರೆಗೆ (2–5 ವರ್ಷಗಳವರೆಗೆ) ಸದ್ಯಕ್ಕೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
📌 ಆಧಾರ್ ಕಾರ್ಡ್ / ಗುರುತು ಪತ್ರ
📌 10 ನೇ ತರಗತಿಯ ಅಂಕಪಟ್ಟಿ
📌 12 ನೇ ತರಗತಿಯ ಅಂಕಪಟ್ಟಿ
📌 ಕಾಲೇಜಿಗೆ ಪ್ರವೇಶದ ದಾಖಲಾತಿ / ಪ್ರವೇಶ ಪತ್ರ
📌 ಬ್ಯಾಂಕ್ ಪಾಸ್ ಬೂಕ್ / ಬ್ಯಾಂಕ್ ವಿವರ
📌 ವಿದ್ಯಾರ್ಥಿ / ಅರ್ಜಿದಾರರ ಫೊಟೊ
📌 ಸಹಿ ಮಾಡಿ ಸಲ್ಲಿಸಲು ದಾಖಲೆಗಳು
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ಲಿಂಕ್-ಗೆ ಭೇಟಿ ನೀಡಿ.
NMPA ಮುಖ್ಯ ಇಂಜಿನಿಯರ್ ನೇಮಕಾತಿ 2026 – ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
https://udyoganews.com/karnataka-jobs/new-mangalore-port-authority-nmpa/
“Apply Now / Create Account” ಬಟನ್-ಅನ್ನು ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚಿಸಿ.
ಲಾಗಿನ್ ಮಾಡಿ ಎಲ್ಲಾ ಅಗತ್ಯ ಮಾಹಿತಿಯನ್ನು ನಮೂದಿಸಿ.
ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು “Submit” ಅನ್ನು ಕ್ಲಿಕ್ ಮಾಡಿ.
https://www.buddy4study.com/scholarship/azim-premji-scholarship
ಅರ್ಜಿ ಸಲ್ಲಿಸಲು ಕೊನೆಯ ದಿನ..
31 ಜನವರಿ 2026