2025ರ ಅತಿ ದೊಡ್ಡ ಐಪಿಒಗೆ ದಿನ ನಿಗದಿ, – ಟಾಟಾ ಕ್ಯಾಪಿಟಲ್‌ IPO ಪೂರೈಸಲಿದೆಯಾ ಹೂಡಿಕೆದಾರರ ಬಹುನಿರೀಕ್ಷೆ ?

Published On: October 5, 2025
Follow Us
date-set-for-biggest-ipo-of-2025-here-are-tata-capital-ipo-details

Whatsapp Telegram

ಟಾಟಾ ಗುಂಪಿನ ಅಂಗಸಂಸ್ಥೆಯಾಗಿರುವ ಟಾಟಾ ಕ್ಯಾಪಿಟಲ್, (Tata Capita IPO) ಬಹುನಿರೀಕ್ಷಿತ IPO ಮೂಲಕ ಅಕ್ಟೋಬರ್ 6, 2025 ರಿಂದ ಸಾರ್ವಜನಿಕ ಚಂದಾದಾರಿಕೆಗೆ ಲಭ್ಯವಾಗಲಿದ್ದು, ಅಕ್ಟೋಬರ್ 8, 2025 ಕ್ಕೆ ಮುಕ್ತಾಯಗೊಳ್ಳಲಿದೆ.

ಆಂಕರ್ ಹೂಡಿಕೆದಾರರ ಬಿಡ್ಡಿಂಗ್ ಪ್ರಕ್ರಿಯೆ ಅಕ್ಟೋಬರ್ 3 ರಿಂದ ಆರಂಭವಾಗಿ, ಒಟ್ಟು ಸಾರ್ವಜನಿಕರಿಂದ ಸುಮಾರು 17,200 ಕೋಟಿ ರೂಪಾಯಿಗಳಷ್ಟು ಬಂಡವಾಳ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಕಂಪನಿಯ ಮಾಲೀಕರಾದ ಟಾಟಾ ಸನ್ಸ್, ಕಂಪನಿಯ 23 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ಸಾರ್ವಜನಿಕ ವಿತರಣೆಯಲ್ಲಿ ತನ್ನ ಪಾಲನ್ನು ಕಡಿಮೆ ಮಾಡಲು ಸಿದ್ಧವಾಗಿದೆ. ಟಾಟಾ ಕ್ಯಾಪಿಟಲ್‌ನಲ್ಲಿ ಹೂಡಿಕೆದಾರರಾದ ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ (IFC) ಸಹ ಸಾರ್ವಜನಿಕ ವಿತರಣೆಯಲ್ಲಿ ಪಾಲನ್ನು ಕಡಿಮೆ ಮಾಡಿ 3.58 ಕೋಟಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಟಾಟಾ ಸನ್ಸ್ ಪ್ರಸ್ತುತ ಟಾಟಾ ಕ್ಯಾಪಿಟಲ್‌ನ 88.6% ಪಾಲನ್ನು ಮತ್ತು ಐಎಫ್‌ಸಿ 1.8% ಪಾಲನ್ನು ಹೊಂದಿವೆ.

ಇದನ್ನೂ ಓದಿರಿ:  ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಬೃಹತ್ ನೇಮಕಾತಿ… ಇಲ್ಲಿದೆ ಸಂಪೂರ್ಣ ಮಾಹಿತಿ

ಟಾಟಾ ಕ್ಯಾಪಿಟಲ್‌ ಸಂಸ್ಥೆಯು 2007 ರಲ್ಲಿ ಸಾಲ ನೀಡಲು ಪ್ರಾರಂಭಿಸಿದಾಗಿನಿಂದ, ಕಂಪನಿಯು 25 ಕ್ಕೂ ಹೆಚ್ಚಿನ ವಿವಿಧ ಉತ್ಪನ್ನಗಳ ಮೂಲಕ 70 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಿದೆ ಮತ್ತು ಮೂರನೇ ವ್ಯಕ್ತಿಯ ಇನ್ಶುರನ್ಸ್ ಮತ್ತು ಕ್ರೆಡಿಟ್ ಕಾರ್ಡ್ ವಿತರಣೆ, ವೆಲ್ತ್ ಮ್ಯಾನೇಜ್‌ಮೆಂಟ್ ಮತ್ತು ಪ್ರೈವೇಟ್ ಇಕ್ವಿಟಿ ಫಂಡ್ ಮ್ಯಾನೇಜ್‌ಮೆಂಟ್ ಸೇರಿದಂತೆ ಸೇವೆಗಳನ್ನು ನೀಡುತ್ತದೆ.

ಟಾಟಾ ಕ್ಯಾಪಿಟಲ್‌ ತನ್ನ ಆದಾಯವನ್ನು FY24 ನಲ್ಲಿ ರೂ. 18,175 ಕೋಟಿಯಿಂದ FY25 ಗೆ ರೂ. 28,313 ಕೋಟಿಗೆ ಏರಿಕೆ ಮಾಡಿಕೊಂಡಿದೆ. ಈ ಸಂಸ್ಥೆ ದೇಶದಾದ್ಯಂತ ಶಾಖೆಗಳನ್ನು ಹೊಂದಿದ್ದು, ದೃಢವಾದ ಹಂಚಿಕೆ ವ್ಯವಸ್ಥೆ ಮತ್ತು ಬಲವಾದ ಡಿಜಿಟಲ್ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತಾ ಬಂದಿದೆ. ಇವೆಲ್ಲವೂ ಒಟ್ಟಾಗಿ ಉತ್ತಮ ಗ್ರಾಹಕ ಅನುಭವವನ್ನು ನೀಡುತ್ತಿದ್ದು, ಅವರು ಮಾರ್ಚ್ 31, 2025 ರ ಹೊತ್ತಿಗೆ 27 ರಾಜ್ಯಗಳು ಮತ್ತು 1,496 ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಖೆಗಳನ್ನು ಒಳಗೊಂಡಿರುವ ವ್ಯಾಪಕವಾದ ಪ್ಯಾನ್-ಇಂಡಿಯಾ ವಿತರಣಾ ಜಾಲವನ್ನು ಕಟ್ಟಿದ್ದಾರೆ.

ನಿಮ್ಮ ಹಣಕ್ಕೆ ಎಫ್ ಡಿ ಭದ್ರತೆಯೊಂದಿಗೆ 12% ಬಡ್ಡಿಯಲ್ಲಿ ಹೂಡಿಕೆ ಮಾಡಲು ಇಲ್ಲಿ ಕ್ಲಿಕ್ ಮಾಡಿ 

ಟಾಟಾ ಕ್ಯಾಪಿಟಲ್ IPO ನ ಬಲಗಳು

  • 150 ವರ್ಷಗಳಿಗೂ ಹೆಚ್ಚಿನ ಪರಂಪರೆಯನ್ನು ಹೊಂದಿರುವ ಟಾಟಾ ಗ್ರೂಪ್‌ನ ಪ್ರಮುಖ ಹಣಕಾಸು ಸೇವೆಗಳ ಕಂಪನಿ.
  • ಅತ್ಯಂತ ಸಮಗ್ರ ಸಾಲ ನೀಡುವ ಉತ್ಪನ್ನಗಳ ಸೂಟ್‌ನೊಂದಿಗೆ, ಭಾರತದಲ್ಲಿ ಮೂರನೇ ಅತಿದೊಡ್ಡ ವೈವಿಧ್ಯಮಯ NBFC.
  • ಓಮ್ನಿ-ಚಾನೆಲ್ ವಿತರಣಾ ಮಾದರಿ, ಅವರ ಪ್ಯಾನ್-ಇಂಡಿಯಾ ಶಾಖೆ ಜಾಲ, ಪಾಲುದಾರಿಕೆಗಳು ಮತ್ತು ಡಿಜಿಟಲ್ ವೇದಿಕೆಗಳನ್ನು ಒಳಗೊಂಡಿದೆ.
  • ಉತ್ತಮ ಡಿಜಿಟಲ್ ತಂತ್ರಜ್ಞಾನ ಬಳಕೆಯೊಂದಿಗೆ ಬಿಸಿನೆಸ್ ನಿರ್ವಹಣೆ.
  • ವಿವಿಧ ಕ್ಷೇತ್ರದಲ್ಲಿ ಹೂಡಿಕೆಯೊಂದಿಗೆ ಅತ್ಯುನ್ನತ ಕ್ರೆಡಿಟ್ ರೇಟಿಂಗ್.
  • ನಿರಂತರವಾಗಿ ಉತ್ತಮ ಆರ್ಥಿಕ ಫಲಿತಾಂಶ ನೀಡುತ್ತಾ ಬಂದಿರುವ ದಾಖಲೆ.
  • ಉತ್ತಮ ವೃತ್ತಿಪರರ ತಂಡದ ಬೆಂಬಲದೊಂದಿಗೆ ಅನುಭವಿ ನಿರ್ವಹಣೆ.

ಟಾಟಾ ಕ್ಯಾಪಿಟಲ್ IPO ಅಪಾಯಗಳು

  • ಸಾಲಗಳ ಮೇಲಿನ ಅಸಲು ಅಥವಾ ಬಡ್ಡಿಯನ್ನು ಮರುಪಾವತಿಸುವಲ್ಲಿ ವಿಳಂಬ ಅಥವಾ ವಿಫಲತೆ.
  • ಅವರು ಪೂರೈಸುವ ವಿವಿಧ ಸೇವೆಗಳಲ್ಲಿ ಉಂಟಾಗುವ ವಿಫಲತೆಯಿಂದ ಕಂಪನಿಯ ಆಸ್ತಿ ಹಾನಿಗೊಳಗಾಗುವ ಅಪಾಯ.
  • ಚಿಲ್ಲರೆ ಗ್ರಾಹಕರಲ್ಲಿ ಸಾಲದ ಬೇಡಿಕೆಯನ್ನು ಪ್ರಮಾಣ ಕಡಿಮೆಯಾಗುವ ಅಥವಾ ಚಿಲ್ಲರೆ ಗ್ರಾಹಕರಲ್ಲಿ ಸಾಲದ ಡೀಫಾಲ್ಟ್ ದರಗಳನ್ನು ಹೆಚ್ಚುವ ಅಪಾಯ.
  • ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಉಂಟಾಗುವ ನಕಾರಾತ್ಮಕ ಪರಿಣಾಮದಿಂದ ಕಂಪನಿಗೆ ಅಪಾಯ.
  • ಬಡ್ಡಿದರಗಳಲ್ಲಿ ಯಾವುದೇ ಪ್ರತಿಕೂಲ ಬದಲಾವಣೆಗಳು.
  • ಗ್ರಾಹಕರಿಗೆ ಇದೇ ರೀತಿಯ ಸೇವೆಗಳನ್ನು ಒದಗಿಸುವ ಇತರ ಸಂಸ್ಥೆಗಳ ಬಲವಾದ ಸ್ಪರ್ಧೆ .
  • ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕ್ಷೇತ್ರದ ಕಾರ್ಯಕ್ಷಮತೆಯ ಮೇಲೆ ಅವಲಂಬನೆ.
  • ಮೂರನೇ ವ್ಯಕ್ತಿಗಳು ಒದಗಿಸುವ ಸೇವೆಗಳಲ್ಲಿ ಯಾವುದೇ ಅಡಚಣೆ, ನಿರ್ಲಕ್ಷ್ಯ, ವಂಚನೆ, ಕೊರತೆ ಅಥವಾ ಅದಕ್ಷತೆ ಉಂಟಾದಲ್ಲಿ ಕಂಪನಿಗೆ ನಷ್ಟದ ಭಯ.
  • ಅವರ ಸೇವೆಗಳನ್ನು ಅಡ್ಡಿಪಡಿಸುವ ಅಥವಾ ಸೂಕ್ಷ್ಮ, ಆಂತರಿಕ ಡೇಟಾ ಅಥವಾ ಗ್ರಾಹಕರ ಮಾಹಿತಿಯನ್ನು ಕದಿಯುವ ಸೈಬರ್ ದಾಳಿಯ ಬೆದರಿಕೆ.

ಇದನ್ನೂ ಓದಿರಿ: ಗೋವಾ ಶಿಪ್‌ಯಾರ್ಡ್ ನೇಮಕಾತಿ 2025 – ತಜ್ಞ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ 

ಟಾಟಾ ಸಮೂಹದ ಸಂಸ್ಥೆ ಎಂಬ ಒಲವು ಗ್ರಾಹಕರಲ್ಲಿ ಕಂಡುಬಂದಿದ್ದರೂ, ಅನ್‌ಲಿಸ್ಟೆಡ್ ಮಾರುಕಟ್ಟೆಯಲ್ಲಿ ಟಾಟಾ ಕ್ಯಾಪಿಟಲ್ ಷೇರುಗಳ ಬೆಲೆ ಕುಸಿತವನ್ನು ಕಂಡಿದೆ. ಏಪ್ರಿಲ್ ತಿಂಗಳಿನಲ್ಲಿ ತನ್ನ ಗರಿಷ್ಠ ಮಟ್ಟದ ಬೆಲೆ 1125 ರೂ. ಹೊಂದಿದ್ದ ಷೇರುಗಳು ಇಂದು ಶೇ.35 ರಷ್ಟು ಕುಸಿತವನ್ನು ಕಂಡು 650 ರಿಂದ 735 ಕ್ಕೆ ವಹಿವಾಟನ್ನು ನಡೆಸುತ್ತಿವೆ. ಮಾರುಕಟ್ಟೆಯ ದುರ್ಬಲ ಭಾವನೆ, ಎನ್‌ಬಿಎಫ್‌ಸಿ ವಲಯದ ಮೇಲಿನ ಒತ್ತಡ ಮತ್ತು ಕಂಪನಿಯ ಅಧಿಕ ಮೌಲ್ಯಮಾಪನದ ಕುರಿತಾದ ಕಳವಳಗಳೇ ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಆದರೆ ಟಾಟಾ ಸಮೂಹದ ಮೇಲಿನ ನಂಬಿಕೆ, ಸಮೂಹದ ಹಿಂದಿನ ಐಪಿಒಗಳು ನೀಡಿರುವ ಬಂಪರ್‌ ಲಾಭದ ಹಿನ್ನೆಲೆಗಳು ಟಾಟಾ ಕ್ಯಾಪಿಟಲ್‌ ಐಪಿಒ ಹೂಡಿಕೆದಾರರನ್ನು ಸೆಳೆಯುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಅಕ್ಟೋಬರ್ 6, 2025 ರಿಂದ ಹೂಡಿಕೆದಾರರು ಮುಗಿಬಿದ್ದು ಐಪಿಒದಲ್ಲಿ ಭಾಗವಹಿಸುವ ಸಾಧ್ಯತೆ ಕಂಡುಬರುತ್ತಿದೆ.

ಡಿಸ್ಕ್ಲೇಮರ್: ಈ ಲೇಖನ ಮಾಹಿತಿ ಹಂಚಿಕೊಳ್ಳುವ ಉದ್ದೇಶಕ್ಕಾಗಿ ಮಾತ್ರ. ಹೂಡಿಕೆ ಮಾಡುವ ಮೊದಲು ದಯವಿಟ್ಟು ನಿಮ್ಮ ಹಣಕಾಸು ಸಲಹೆಗಾರರ ಸಲಹೆ ಪಡೆಯಿರಿ.

Mahesh Kumar M.

ಮಹೇಶ್ ಕುಮಾರ್ ಎಂ. ಅವರು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯ ಉದ್ಯೋಗ ನ್ಯೂಸ್ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ಇವರು ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

Join WhatsApp

Join Now

Join Telegram

Join Now

Related Posts

Leave a comment