ಭಾರತೀಯ ವಾಯುಪಡೆಯ AFCAT 2026 ನೇಮಕಾತಿ ಆರಂಭ – ಫ್ಲೈಯಿಂಗ್ ಹಾಗೂ ಗ್ರೌಂಡ್ ಡ್ಯೂಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Published On: November 9, 2025
Follow Us
air-force-recruitment-afcat-2026

ಭಾರತೀಯ ವಾಯುಪಡೆಯು (IAF) Air Force Common Admission Test (AFCAT) – 01/2026 ಮತ್ತು ಎನ್‌ಸಿಸಿ ವಿಶೇಷ ಪ್ರವೇಶಕ್ಕಾಗಿ ಹೊಸ ಅಧಿಸೂಚನೆಯನ್ನು ಪ್ರಕಟಿಸಿದೆ. ವಾಯುಪಡೆಯ ಫ್ಲೈಯಿಂಗ್ ಹಾಗೂ ಗ್ರೌಂಡ್ ಡ್ಯೂಟಿ ಶಾಖೆಯಲ್ಲಿನ ಹುದ್ದೆಗಳಿಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನವೆಂಬರ್ 10, 2025 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಡಿಸೆಂಬರ್ 9, 2025 ರೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ

ಫ್ಲೈಯಿಂಗ್ ಬ್ರಾಂಚ್ ಹುದ್ದೆ – ಅಭ್ಯರ್ಥಿಗಳು ಗಣಿತ ಮತ್ತು ಭೌತಶಾಸ್ತ್ರದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಅಥವಾ ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ, ಮಾನ್ಯತೆ ಪಡೆದ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಬಿ.ಇ./ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.

ಗ್ರೌಂಡ್ ಡ್ಯೂಟಿ (ತಾಂತ್ರಿಕ ಮತ್ತು ತಾಂತ್ರಿಕೇತರ) – ಅಭ್ಯರ್ಥಿಗಳಿಗೆ ಗಣಿತ ಮತ್ತು ಭೌತಶಾಸ್ತ್ರದಲ್ಲಿ ಕನಿಷ್ಠ 50% ಅಂಕಗಳಿರಬೇಕು ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ

ಫ್ಲೈಯಿಂಗ್ ಬ್ರಾಂಚ್: 20 ರಿಂದ 24 ವರ್ಷಗಳೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಗ್ರೌಂಡ್ ಡ್ಯೂಟಿ: 20 ರಿಂದ 26 ವರ್ಷ ವಯಸ್ಸಿನ ಅಭ್ಯರ್ಥಿಗಳಿಗೆ ಅವಕಾಶವಿದೆ.

ಆಯ್ಕೆ ಪ್ರಕ್ರಿಯೆ

  • ಲಿಖಿತ ಪರೀಕ್ಷೆ (AFCAT)
  • ವಾಯುಪಡೆ ಆಯ್ಕೆ ಮಂಡಳಿ (AFSB) ಸಂದರ್ಶನ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ವೇತನ ಮತ್ತು ಸೌಲಭ್ಯಗಳು

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 56,100 ರಿಂದ ರೂ. 1,77,500 ವರೆಗೆ ವೇತನ ನೀಡಲಾಗುತ್ತದೆ. ವಾಯುಪಡೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುವವರಿಗೆ ಉಚಿತ ವಸತಿ, ವೈದ್ಯಕೀಯ ಸೌಲಭ್ಯಗಳು ಮತ್ತು ಕ್ಯಾನ್ಟೀನ್ ಸೌಕರ್ಯಗಳು ದೊರೆಯುತ್ತವೆ.

ಅರ್ಜಿ ಶುಲ್ಕ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹500 + GST ಅನ್ವಯಿಸುತ್ತದೆ.

ಫ್ಲೈಯಿಂಗ್ ಹಾಗೂ ಗ್ರೌಂಡ್ ಡ್ಯೂಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ

  • ಅಧಿಕೃತ ವೆಬ್‌ಸೈಟ್‌ https://afcat.cdac.in/AFCAT ಗೆ ಭೇಟಿ ನೀಡಿ.
  • “AFCAT 01/2026 / NCC Special Entry” ಲಿಂಕ್ ತೆರೆಯಿರಿ.
  • ಹೊಸ ಬಳಕೆದಾರರಾಗಿದ್ದರೆ ನೋಂದಾಯಿಸಿ ಅಥವಾ ಲಾಗಿನ್ ಆಗಿ.
  • ವೈಯುಕ್ತಿಕ ವಿವರಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ ಭವಿಷ್ಯದ ಉಲ್ಲೇಖಕ್ಕಾಗಿ ಸಂಗ್ರಹಿಸಿರಿ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ನವೆಂಬರ್ 10, 2025
ಅರ್ಜಿ ಸಲ್ಲಿಕೆ ಕೊನೆ ದಿನಾಂಕ – ಡಿಸೆಂಬರ್ 09, 2025

ಈ AFCAT ನೇಮಕಾತಿಯು ವಾಯುಪಡೆಯು ನೀಡುವ ಅತ್ಯುತ್ತಮ ಉದ್ಯೋಗಾವಕಾಶಗಳಲ್ಲಿ ಒಂದಾಗಿದೆ. ರಾಷ್ಟ್ರಸೇವೆಯಲ್ಲಿ ಉತ್ಸಾಹವಿರುವ ಯುವಕರು ಈ ಅವಕಾಶವನ್ನು ಕಳೆದುಕೊಳ್ಳಬಾರದು.

ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆಯ ಪಿಡಿಎಫ್ ಇಲ್ಲಿ ಮಾಡಿ
ಅರ್ಜಿಯನ್ನು ಸಲ್ಲಿಸಿ ಇಲ್ಲಿ ಮಾಡಿ
ಅಧಿಕೃತ ವೆಬ್ ಸೈಟ್ ಇಲ್ಲಿ ಮಾಡಿ

Mahesh Kumar M.

ಮಹೇಶ್ ಕುಮಾರ್ ಎಂ. ಅವರು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯ ಉದ್ಯೋಗ ನ್ಯೂಸ್ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ಇವರು ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

Join WhatsApp

Join Now

Join Telegram

Join Now

Leave a comment