ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ Bank of Baroda 2025-26 ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆ 1961 ಅಡಿಯಲ್ಲಿನ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 2700 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಕನಿಷ್ಠ ಪದವೀಧರರು ಈ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು 01 ಡಿಸೆಂಬರ್ 2025 ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಬ್ಯಾಂಕ್ ಆಫ್ ಬರೋಡಾ ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು: ಬ್ಯಾಂಕ್ ಆಫ್ ಬರೋಡಾ (BOB)
ಹುದ್ದೆಗಳ ಸಂಖ್ಯೆ: 2700 ಹುದ್ದೆಗಳು
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆ ಹೆಸರು: ಅಪ್ರೆಂಟಿಸ್‌ಗಳು
ಸಂಬಳ: ತಿಂಗಳಿಗೆ ರೂ. 15,000/-
ಇದನ್ನೂ ಓದಿರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಫಾರ್ಮಸಿಸ್ಟ್, ನರ್ಸಿಂಗ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ರಾಜ್ಯವಾರು ಹುದ್ದೆಗಳ ಸಂಖ್ಯೆ
ಭಾರತದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹುದ್ದೆಗಳು ಖಾಲಿ ಇವೆ. ಅದರಲ್ಲಿ ಗುಜರಾತ್ (400), ಕರ್ನಾಟಕ (440), ಮಹಾರಾಷ್ಟ್ರ (297), ಮತ್ತು ಉತ್ತರ ಪ್ರದೇಶ (307) ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹೆಚ್ಚಿನ ಅವಕಾಶಗಳಿವೆ.
| ರಾಜ್ಯದ ಹೆಸರು | ಪೋಸ್ಟ್ಗಳ ಸಂಖ್ಯೆ |
|---|---|
| ಆಂಧ್ರಪ್ರದೇಶ | 38 |
| ಅಸ್ಸಾಂ | 21 |
| ಬಿಹಾರ | 47 |
| ಚಂಡಿಗಡ | 12 |
| ಛತ್ತೀಸ್ಗಡ | 48 |
| ದಾದ್ರಾ ಮತ್ತು ನಗರ ಹವೇಲಿ | 05 |
| ದೆಹಲಿ | 119 |
| ಗೋವಾ | 10 |
| ಗುಜರಾತ್ | 400 |
| ಹರಿಯಾಣ | 36 |
| ಜಮ್ಮು ಮತ್ತು ಕಾಶ್ಮೀರ | 05 |
| ಜಾರ್ಖಂಡ್ | 15 |
| ಕರ್ನಾಟಕ | 440 |
| ಕೇರಳ | 52 |
| ಮಧ್ಯ ಪ್ರದೇಶ | 56 |
| ಮಹಾರಾಷ್ಟ್ರ | 297 |
| ಮಣಿಪುರ | 02 |
| ಮಿಜೋರಾಮ್ | 05 |
| ಒಡಿಶಾ | 29 |
| ಪುದುಚೇರಿ | 06 |
| ಪಂಜಾಬ್ | 96 |
| ರಾಜಸ್ಥಾನ್ | 215 |
| ತಮಿಳುನಾಡು | 159 |
| ತೆಲಂಗಾಣ | 154 |
| ಉತ್ತರ ಪ್ರದೇಶ | 307 |
| ಉತ್ತರಖಂಡ್ | 22 |
| ಪಶ್ಚಿಮ ಬಂಗಾಳ | 104 |
ಶೈಕ್ಷಣಿಕ ಅರ್ಹತೆ
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರ ಮಾನ್ಯ ಮಾಡಿದ ಸಮಾನ ಅರ್ಹತೆಯುಳ್ಳವರು ಸಹ ಅರ್ಹರಾಗಿರುತ್ತಾರೆ.
ಹುದ್ದೆಯ ವಿವರಗಳು
| ಪೋಸ್ಟ್ ಹೆಸರು | ಪೋಸ್ಟ್ಗಳ ಸಂಖ್ಯೆ |
|---|---|
| ಉಪ ಮುಖ್ಯ ತಂತ್ರಜ್ಞಅಧಿಕಾರಿ | 1 |
| ಉಪ ಮುಖ್ಯ ಹಣಕಾಸು ಅಧಿಕಾರಿ | 1 |
| ಉಪ ಮುಖ್ಯ ಡಿಜಿಟಲ್ ಅಧಿಕಾರಿ | 1 |
| ಉಪ ಮುಖ್ಯ ಅಪಾಯ ಅಧಿಕಾರಿ | 1 |
| ಮುಖ್ಯ ರಕ್ಷಣಾ ಬ್ಯಾಂಕಿಂಗ್ | 1 |
| ಹಿರಿಯ ಉಪಾಧ್ಯಕ್ಷರು | 1 |
| ಉಪ ಉಪಾಧ್ಯಕ್ಷರು | 4 |
| ಉಪ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ | 1 |
| ಉಪಾಧ್ಯಕ್ಷರು | 1 |
ವಯೋಮಿತಿ
ನವೆಂಬರ್ 1, 2025 ರಂತೆ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ 28 ವರ್ಷಗಳು. ವಯೋಮಿತಿ ಸಡಿಲಿಕೆ: ಪ.ಜಾತಿ ಹಾಗೂ ಪ.ಪಂಗಡ – 5 ವರ್ಷ, ಓಬಿಸಿ – 3 ವರ್ಷ, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷವರೆಗೆ.
ಆಯ್ಕೆ ಪ್ರಕ್ರಿಯೆ
- ಆನ್ಲೈನ್ ಪರೀಕ್ಷೆ
- ದಾಖಲೆ ಪರಿಶೀಲನೆ
- ಸ್ಥಳೀಯ ಭಾಷಾ ಪರೀಕ್ಷೆ
ಈ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳು ಅಪ್ರೆಂಟಿಸ್ ತರಬೇತಿಗೆ ಆಯ್ಕೆಯಾಗುತ್ತಾರೆ.
ಇದನ್ನೂ ಓದಿರಿ: Chaff Cutter Subsidy: ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ಖರೀದಿಗೆ ಅರ್ಜಿ ಆಹ್ವಾನ !
ಶಿಷ್ಯ ವೇತನ
ತರಬೇತಿ ಅವಧಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ತಿಂಗಳಿಗೆ 15,000 ರೂಪಾಯಿ ವರೆಗೆ ಸ್ಟೈಪೆಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ
- ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹800
- ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ: ₹400
- ಪ.ಜಾತಿ, ಪ.ಪಂಗಡ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ
ಅರ್ಜಿ ಸಲ್ಲಿಸುವ ವಿಧಾನ
- ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
- ಯಾವ ಹುದ್ದೆಗೆ ಅರ್ಜಿ ಸಲ್ಲಿಸಬಯಸುವಿರಿ ಎಂಬುದನ್ನು ಆಯ್ಕೆ ಮಾಡಿರಿ.
- ನಂತರ Register ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮ್ಮ ಖಾತೆ ತೆರೆದು login ಮಾಡಿಕೊಳ್ಳಿ
- ಮುಂದಿನ ಪುಟದಲ್ಲಿ ಕೇಳಲಾದ ಎಲ್ಲ ಮಾಹಿತಿಗಳನ್ನು ಪೂರೈಸಿರಿ.
- ಅಗತ್ಯ ದಾಖಲೆಗಳು, ಫೋಟೋ, ಸಹಿ ಅಪ್‌ಲೋಡ್ ಮಾಡಿ ಹಾಗೂ ಶುಲ್ಕ ಪಾವತಿಸಿ.
- ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಮುದ್ರಣ ತೆಗೆದು ಸಂಗ್ರಹಿಸಿ.
ಅರ್ಜಿ ಸಲ್ಲಿಕೆ ದಿನಾಂಕಗಳು
ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ – ನವೆಂಬರ್ 11, 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ – ಡಿಸೆಂಬರ್ 1, 2025
ಅತ್ಯುತ್ತಮ ಬ್ಯಾಂಕ್‌ನಲ್ಲಿ ಪ್ರಾಯೋಗಿಕ ತರಬೇತಿ ಪಡೆದು ಬ್ಯಾಂಕಿಂಗ್ ವಲಯಕ್ಕೆ ನಿಮ್ಮ ವೃತ್ತಿ ಹೆಜ್ಜೆಯನ್ನು ಇಡುವ ಸುವರ್ಣಾವಕಾಶ ಇದು. ಸಮಯ ಮಿಸ್ ಮಾಡದೇ ಇಂದುಲೇ ಅರ್ಜಿ ಸಲ್ಲಿಸಿ!
ಪ್ರಮುಖ ಲಿಂಕುಗಳು
| ಅಧಿಕೃತ ಅಧಿಸೂಚನೆಯ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ ಲೈನ್ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
| ನೇರವಾಗಿ ಅರ್ಜಿ ಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |