ಬೆಂಗಳೂರು ಡಿ ಸಿ ಸಿ ಬ್ಯಾಂಕ್ ನೇಮಕಾತಿ 2025 – ಇಂದೇ ಅರ್ಜಿಯನ್ನು ಸಲ್ಲಿಸಿ

Published On: September 30, 2025
Follow Us
bengaluru-dcc-bank-recruitment-2025-apply-online

Whatsapp
Telegram
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (Bengaluru DCC Bank Recruitment 2025) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ  ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 02-ಅಕ್ಟೋಬರ್-2025 ಕ್ಕೂ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಬೆಂಗಳೂರು ಡಿ ಸಿ ಸಿ ಬ್ಯಾಂಕ್ ನೇಮಕಾತಿ 2025 ರ ಸಂಕ್ಷಿಪ್ತ ವಿವರ

ನೇಮಕಾತಿ ಸಂಸ್ಥೆ: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (BDCC Bank)
ಹುದ್ದೆಗಳ ಸಂಖ್ಯೆ: 02 ಹುದ್ದೆಗಳು
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಉಪ ಪ್ರಧಾನ ವ್ಯವಸ್ಥಾಪಕರು,  ಶಾಖಾ ವ್ಯವಸ್ಥಾಪಕರು
ವೇತನ ಶ್ರೇಣಿ: ಮಾಸಿಕ ರೂ. 65,950 – 1,34,200/-

ಇದನ್ನೂ ಓದಿರಿ: 2025ರ ಅತಿ ದೊಡ್ಡ ಐಪಿಒಗೆ ದಿನ ನಿಗದಿ, – ಟಾಟಾ ಕ್ಯಾಪಿಟಲ್‌ IPO ಪೂರೈಸಲಿದೆಯಾ ಹೂಡಿಕೆದಾರರ ಬಹುನಿರೀಕ್ಷೆ ?

ಬೆಂಗಳೂರು ಡಿ ಸಿ ಸಿ ಬ್ಯಾಂಕ್ ನೇಮಕಾತಿ 2025 ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸಂಬಂಧಪಟ್ಟ ಪದವಿ ಹಾಗೂ ಅನುಭವ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಓದಿ.

ವೇತನ ಶ್ರೇಣಿ:
ಉಪ ಪ್ರಧಾನ ವ್ಯವಸ್ಥಾಪಕರು – ರೂ. 69,250 – 1,34,200/-
ಶಾಖಾ ವ್ಯವಸ್ಥಾಪಕರು – ರೂ. 65,950 – 1,24,900/-

ವಯೋಮಿತಿ: BDCC Bank ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು. ಅರ್ಜಿಗಳನ್ನು ಭರ್ತಿ ಮಾಡಲು ನಿಗಧಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ನಿಗಧಿತ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು ಎಂದು ಇದ್ದು, ಈ ಹುದ್ದೆಗಳಿಗೆ ಕನಿಷ್ಠ ೫ ವರ್ಷಗಳ ಸೇವಾನುಭವ ನಿಗದಿ ಪಡಿಸಿರುವುದರಿಂದ ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಹೆಚ್ಚುವರಿಯಾಗಿ ೫ ವರ್ಷಗಳ ವಯೋಮಿತಿಗೆ ಸಡಿಲಗೊಳಿಸಲಾಗಿರುತ್ತದೆ.

ಅರ್ಜಿ ಶುಲ್ಕ: ಯಾವುದೇ ವರ್ಗದಡಿಯಲ್ಲಿ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ರೂ.2000/-ಗಳ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕ ಅನ್ವಯಿಸುತ್ತದೆ. ಅರ್ಜಿ ಶುಲ್ಕವನ್ನು Payment using Net Banking, Credit Card, Debit Card, UPI  ಮುಖಾಂತರ ಅರ್ಜಿ ಶುಲ್ಕ ಮತ್ತು Payment Gateway ಚಾರ್ಜಸ್‌ನ್ನು ಪಾವತಿ ಮಾಡತಕ್ಕದ್ದು. ಶುಲ್ಕವನ್ನು ಪಾವತಿಸಲು ನಿಗಧಿಪಡಿಸಿದ ಕೊನೆಯ ದಿನಾಂಕ:02-10-2025 ರ ರಾತ್ರಿ 11.59 ಗಂಟೆಯೊಳಗಾಗಿ ಪಾವತಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆಯಲ್ಲಿ ಪಡೆಯಲಾದ ಅಂಕಗಳ ಶೇಕಡಾವಾರು ಆಧಾರದ ಮೇಲೆ 1:5 ರ ಅನುಪಾತದಲ್ಲಿ  ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು.

ಇದನ್ನೂ ಓದಿರಿ: ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ 2025 – 350 ಮ್ಯಾನೇಜರ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು ಡಿ ಸಿ ಸಿ ಬ್ಯಾಂಕ್ ನೇಮಕಾತಿ 2025 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ . (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ) ತೆರೆದ ಕೂಡಲೇ ಕಂಪ್ಯೂಟರ್ ಪರದೆಯ ಮೇಲೆ DCC Bank Recruitment 2025 ಎಂಬ ಆಯ್ಕೆ ಕಂಡುಬರುತ್ತದೆ. ಅರ್ಜಿಯನ್ನು ಭರ್ತಿ ಮಾಡುವ ಪೂರ್ವದಲ್ಲಿ ಅಧಿಸೂಚನೆ ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಓದತಕ್ಕದ್ದು ಮತ್ತು ಅಂತಿಮವಾಗಿ ನಿಯಮ ಮತ್ತು ಷರತ್ತುಗಳನ್ನು ಕೆಳಗಿನ ಚೆಕ್‌ಬಾಕ್ಸ್ ಅನ್ನು ಒತ್ತುವ ಮೂಲಕ ಒಪ್ಪಿಕೊಳ್ಳತಕ್ಕದ್ದು ಮತ್ತು Open Application ಗುಂಡಿಯನ್ನು ಒತ್ತಿ ಮುಂದುವರಿಯಿರಿ.
  • ಸಂಬಂಧಪಟ್ಟ ಹುದ್ದೆಯನ್ನು ಆಯ್ಕೆ ಮಾಡಿApply ಗುಂಡಿಯನ್ನು ಒತ್ತಿ ಅರ್ಜಿಯನ್ನು ಭರ್ತಿಮಾಡತಕ್ಕದ್ದು. ಅರ್ಜಿಯನ್ನು ಭರ್ತಿ ಮಾಡಿದ ನಂತರ ನಮೂದಿಸಿದ ವಿವರಗಳನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿಕೊಂಡು, ಎಲ್ಲಾ ವಿವರಗಳು ಸರಿಯಾಗಿವೆಯೆಂದು ಖಚಿತ ಪಡಿಸಿಕೊಂಡ ನಂತರ Preview ಗುಂಡಿಯನ್ನು ಒತ್ತಿ ಮುಂದುವರಿಯಿರಿ.
  • ನಿಮ್ಮ ಸಹಿಯೊಂದಿಗಿನ ಪಾಸ್ ಪೋರ್ಟ್ ಗಾತ್ರದ ಸ್ಕ್ಯಾನ್ ಮಾಡಿದ ಭಾವಚಿತ್ರವನ್ನು ಅಪ್ ಲೋಡ್ ಮಾಡುವ ಬಗ್ಗೆ Next ಗುಂಡಿಯನ್ನು ಒತ್ತಿ.
  • ಈ ಹಂತದಲ್ಲಿ ಅಭ್ಯರ್ಥಿಯು ನೊಂದಾಯಿಸಿದ ಇಮೇಲ್ ವಿಳಾಸಕ್ಕೆ ಒಂದು ಸ್ವಯಂಚಾಲಿತ ಇಮೇಲ್ ಮೂಲಕ ಅವರ Application ID ಮತ್ತು Password ಅನ್ನು ಕಳುಹಿಸಲಾಗುವುದು. ಅಭ್ಯರ್ಥಿಯು Edit Application ಗುಂಡಿಯನ್ನು ಒತ್ತಿ  ಅApplication ID ಅವರ Password ಅನ್ನು ಬಳಸಿ ತಮ್ಮ ವಿವರಗಳನ್ನು ಅಪಡೇಟ್ ಮಾಡಬಹುದು ಅಥವಾ ಅಪ್ಲೋಡ್  ಮಾಡಿದ ಮಾಹಿತಿಯನ್ನು ಬದಲಾಯಿಸಬಹುದು.
  • ನೀವು ಸಹಿಯೊಂದಿಗಿನ ಸ್ಕ್ಯಾನ್ ಮಾಡಿದ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರವನ್ನು ಆಯ್ಕೆ ಮಾಡುವ ಬಗ್ಗೆ Browse ಗುಂಡಿಯನ್ನು ಒತ್ತಿ ಮತ್ತು ನಿಮ್ಮ ಸಹಿಯೊಂದಿಗಿನ ಭಾವಚಿತ್ರವನ್ನು ಪೂರ್ವದರ್ಶನ ಮಾಡಲು Submit ಗುಂಡಿಯನ್ನು ಒತ್ತಿ.
  • ಅರ್ಜಿಯ ಮುದ್ರಣವನ್ನು ಪಡೆಯಲು Print Application ಗುಂಡಿಯನ್ನು ಒತ್ತಿ, ಅನಂತರವೇ Application Preview ಮೂಡಲಿದ್ದು, ಅಭ್ಯರ್ಥಿಗಳು ಅರ್ಜಿಯ ಪ್ರತಿಯನ್ನು ಕಡ್ಡಾಯವಾಗಿ Download ಮಾಡಿಕೊಳ್ಳತಕ್ಕದ್ದು.
  • ನಂತರ ಅರ್ಜಿ ಶುಲ್ಕವನ್ನು ಪಾವತಿಸುವುದಕ್ಕೆ Post Office Challan ಗುಂಡಿಯನ್ನು ಒತ್ತಿ, challan ಪ್ರತಿಯನ್ನು Download ಮಾಡಿಕೊಂಡು ಕರ್ನಾಟಕ ರಾಜ್ಯದಲ್ಲಿನ ಯಾವುದೇ ಇ-ಪಾವತಿ ಅಂಚೆ ಕಛೇರಿಗೆ ಹೋಗಿ, [ನಿಗದಿತ ಅರ್ಜಿ ಶುಲ್ಕ + ಅನ್ವಯಿಸುವ ಸೇವಾ ತೆರಿಗೆಯನ್ನು] ಪಾವತಿ ಮಾಡಿ. ಅಂತಿಮವಾಗಿ ಪೋಸ್ಟ್ ಆಫೀಸ್ ಸ್ಟಿಕ್ಕರ್ ಅನ್ನು ನಿಮ್ಮ challan ಪ್ರತಿಯ ಮೇಲೆ ಅಂಟಿಸುವುದರಿಂದ ನಿಮ್ಮ ಶುಲ್ಕ ಪಾವತಿಯನ್ನು ದೃಢಪಡಿಸಲಾಗುತ್ತದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17-09-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02-10-2025

ಬೆಂಗಳೂರು ಡಿ ಸಿ ಸಿ ಬ್ಯಾಂಕ್ ನೇಮಕಾತಿ 2025 ರ ಪ್ರಮುಖ ಲಿಂಕ್‌ಗಳು

ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿರಿ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಬೃಹತ್ ನೇಮಕಾತಿ… ಇಲ್ಲಿದೆ ಸಂಪೂರ್ಣ ಮಾಹಿತಿ

Mahesh Kumar M.

ಮಹೇಶ್ ಕುಮಾರ್ ಎಂ. ಅವರು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯ ಉದ್ಯೋಗ ನ್ಯೂಸ್ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ಇವರು ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

Join WhatsApp

Join Now

Join Telegram

Join Now

Leave a comment