ಜನವರಿ ತಿಂಗಳ ವಿವಿಧ ಬ್ಯಾಂಕ್ ಹುದ್ದೆಗಳ ಮಾಹಿತಿ..

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಬ್ಯಾಂಕ್ ಆಫ್ ಇಂಡಿಯಾ (BOI) ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (UBI) ತನ್ನ ಶಾಖೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.

ಕೇಂದ್ರ ಲೋಕ ಸೇವಾ ಆಯೋಗ ಕಂಬೈನ್ಡ್ ಡೆಫೆನ್ಸ್ ಸರ್ವೀಸ್ (I) ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟ ಮಾಡಿದೆ. ಆಯೋಗವು 341 ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನ.

SBI SCO ನೇಮಕಾತಿ 2021:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಡಿಸೆಂಬರ್ 24, 2021 ರಿಂದ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಈ ಪೋಸ್ಟ್‌ಗಳಿಗೆ 13 ಜನವರಿ 2022 ರವರೆಗೆ ಅಧಿಕೃತ ವೆಬ್‌ಸೈಟ್ sbi.co.in ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲಿ ಒಟ್ಟು 7 ಖಾಲಿ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರು ಸಿಟಿ ಪೊಲೀಸ್ ನೇಮಕಾತಿ 2022 |16 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ..

 

BOI ನೇಮಕಾತಿ 2021:
ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್ ಸೆಕ್ಯುರಿಟಿ ಆಫೀಸರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಡಿಸೆಂಬರ್ 24, 2021 ರಿಂದ ಶುರುವಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bankofindia.co.in ಮೂಲಕ ಜನವರಿ 7, 2022 ರವರೆಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ಒಟ್ಟು 25 ಖಾಲಿ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ…

UBI ನೇಮಕಾತಿ 2021:
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಈ ಪೋಸ್ಟ್‌ಗಳಿಗೆ ಜನವರಿ 7 ರವರೆಗೆ ಅಧಿಕೃತ ವೆಬ್‌ಸೈಟ್ Unionbankofindia.co.in ಮೂಲಕ ಅರ್ಜಿ ಸಲ್ಲಿಸಬಹುದು. ವಿವಿಧ ಹುದ್ದೆಗಳ ಒಟ್ಟು 25 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…

Abhyudaya Bank Recruitment 2022

ಅಭ್ಯುದಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್(Abhyudaya Co-Operative Bank Ltd)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 15 ಮ್ಯಾನೇಜ್​​ಮೆಂಟ್​ ಟ್ರೇನಿ (Management Trainee) ಹುದ್ದೆಗಳು ಖಾಲಿ ಇದೆ. ಸಿಎ, ಎಂಬಿಎ, ಪಿಜಿಡಿಬಿಎಂ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಡಿಸೆಂಬರ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು  ಆನ್​ಲೈನ್​(Online)ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜನವರಿ 3, 2022 ಆಗಿದೆ. ಅಭ್ಯರ್ಥಿಗಳು ಅಭ್ಯುದಯ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್ ​abhyudayabank.co.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ  ಪಡೆದುಕೊಳ್ಳಬಹುದು

ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ (KMF)ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ(Application) ಆಹ್ವಾನಿಸಿದೆ.

 

ಸಾರಸ್ವತ ಬ್ಯಾಂಕಿನಲ್ಲಿ 300 ಜೂನಿಯರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾರಸ್ವತ್ ಬ್ಯಾಂಕ್ (Saraswat Bank) ಖಾಲಿ ಇರುವ ಜೂನಿಯರ್ ಆಫೀಸರ್ (Junior Officer) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸಾರಸ್ವತ್ ಬ್ಯಾಂಕ್ (saraswat bank) ನಲ್ಲಿ ಖಾಲಿ ಇರೋ 300 ಪೋಸ್ಟ್‌ಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು https://www.saraswatbank.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಆಸಕ್ತಿಯುಳ್ಳ ಅಭ್ಯರ್ಥಿಗಳು  ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ನೋಂದಣಿ ಪ್ರಕ್ರಿಯೆಯು ಡಿಸೆಂಬರ್ 22ರಿಂದ ಶುರು ವಾಗಿದ್ದು,  ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

FSL ನ ಅಪರಾಧ ಪರಿಶೀಲನಾ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ…

 

NHB Recruitment 2021 : ವಿವಿಧ ಸ್ತರದ ಮ್ಯಾನೇಜರ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ನ್ಯಾಷನಲ್ ಹೌಸಿಂಗ್ ಬ್ಯಾಂಕ್‌(National Housing Bank)ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳನ್ನು ತಿಳಿದು ಕೊಳ್ಳಲು ಅಭ್ಯರ್ಥಿಗಳು ನ್ಯಾಷನಲ್‌ ಹೌಸಿಂಗ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ www.nhm.org.in ಗೆ ಭೇಟಿ ನೀಡಿ ಪರಿಶೀಲಿಸಬಹುದು. ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನ ಸೀನಿಯರ್ ಮ್ಯಾನೇಜ್ಮೆಂಟ್‌ ಗ್ರೇಡ್‌ ಸ್ಕೇಲ್‌-IV (ರೀಜನಲ್ ಮ್ಯಾನೇಜರ್ (Regional Manager), ರಿಸ್ಕ್‌ ಮ್ಯಾನೇಜ್ಮೆಂಟ್‌ (Risk Management), ಮಿಡಲ್ ಮ್ಯಾನೇಜ್ಮೆಂಟ್ ಗ್ರೇಡ್‌ ಸ್ಕೇಲ್ 2 ಅಂದರೆ ಡೆಪ್ಯೂಟಿ ಮ್ಯಾನೇಜರ್(Deputy Manager) ಮತ್ತು ಜೂನಿಯರ್ ಮ್ಯಾನೇಜ್ಮೆಂಟ್‌ ಸ್ಕೇಲ್‌ ಅಂದರೆ ಅಸಿಸ್ಟಂಟ್‌ ಮ್ಯಾನೇಜರ್ (Assistant Manager) ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಿದೆ.