ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (AHFL) 2025-2026 ನೇ ಸಾಲಿನ ಆಧಾರ್ ಕೌಶಲ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸುತ್ತಿದೆ. ದೈಹಿಕ ಅಂಗವೈಕಲ್ಯ ಹೊಂದಿರುವ ಮತ್ತು ಭಾರತದಲ್ಲಿ ಸಾಮಾನ್ಯ ಅಥವಾ ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳ ಯಾವುದೇ ವರ್ಷದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ₹10,000 ರಿಂದ ₹50,000 ವರೆಗಿನ ವಿದ್ಯಾರ್ಥಿವೇತನ ದೊರೆಯಲಿದೆ.
ವಿದ್ಯಾರ್ಥಿವೇತನದ ಮುಖ್ಯಾಂಶಗಳು
- ಧನಸಹಾಯ: ₹10,000 ರಿಂದ ₹50,000
- ಅರ್ಜಿ ಕೊನೆಯ ದಿನಾಂಕ: 13 ಜನವರಿ 2026
- ಅರ್ಹತಾ ಶರತ್ತುಗಳು:
- ಶಾರೀರಿಕ ಅಂಗವೈಕಲ್ಯ ಹೊಂದಿರಬೇಕು
- ಕನಿಷ್ಠ 60% ಅಂಕಗಳೊಂದಿಗೆ ಕಳೆದ ವರ್ಷ ಪಾಸಾಗಿರಬೇಕು
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರಬೇಕು
- ಭಾರತದ ನಿವಾಸಿಯಾಗಿರಬೇಕು.
ಇದನ್ನೂ ಓದಿರಿ: Tata Capital Pankh Scholarship: ಟಾಟಾ ಕ್ಯಾಪಿಟಲ್ ವತಿಯಿಂದ ವಿದ್ಯಾರ್ಥಿಗಳಿಗೆ 1 ಲಕ್ಷಗಳವರೆಗೆ ಸಿಗಲಿದೆ ವಿದ್ಯಾರ್ಥಿವೇತನ !
ವಿದ್ಯಾರ್ಥಿವೇತನಕ್ಕಾಗಿ ಅರ್ಹರಾದವರು ಯಾರು?
- ದೈಹಿಕ ಅಂಗವೈಕಲ್ಯ ಹೊಂದಿರುವವರು
- ಸಾಮಾನ್ಯ ಅಥವಾ ವೃತ್ತಿಪರ ಪದವಿಪೂರ್ವ ಅಥವಾ ಪದವಿಯಲ್ಲಿ ಯಾವುದೇ ವರ್ಷದ ಅಧ್ಯಯನ ಮಾಡುವವರು
- ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹3 ಲಕ್ಷ ದ ಒಳಗಿರಬೇಕು
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- 12ನೇ ತರಗತಿಯ ಮತ್ತು ಹಿಂದಿನ ವರ್ಷದ ಅಂಕಪಟ್ಟಿ
- ಆದಾಯ ಪ್ರಮಾಣ ಪತ್ರ
- ಶುಲ್ಕ ರಶೀದಿ
- ಶಾರೀರಿಕ ಅಂಗವೈಕಲ್ಯ ದೃಢೀಕರಣ ಪತ್ರ
- ಬ್ಯಾಂಕ್ ಪಾಸ್‌ಬುಕ್ ಪ್ರತಿ
- ಫೋಟೋ
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್‌ಸೈಟ್ buddy4study.com ಗೆ ತೆರಳಿ.
- ಅರ್ಜಿ ಫಾರ್ಮ್ ತುಂಬಿ
- ಸಕಲ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಕೊನೆಯ ದಿನಾಂಕಕ್ಕೂ ಮೊದಲು ಸಲ್ಲಿಸಿ
ಈ ವಿದ್ಯಾರ್ಥಿವೇತನ ಯೋಜನೆಯ ಉದ್ದೇಶ ಎಲ್ಲ ವಿದ್ಯಾರ್ಥಿಗಳಿಗೆ ಭೌಗೋಳಿಕ, ಆರ್ಥಿಕ ಅಥವಾ ದೈಹಿಕ ಸವಾಲುಗಳನ್ನು ಮೀರಿ ಸಮಾನ ಶಿಕ್ಷಣ ಅವಕಾಶವನ್ನು ಸೃಷ್ಟಿಸುವುದು. ನಿಮ್ಮ ಭವಿಷ್ಯವನ್ನು ಹೊಸ ಆಶಯಗಳೊಂದಿಗೆ ಈ ಅವಕಾಶವನ್ನು ಸಂಪೂರ್ಣ ಬಳಸಿಕೊಳ್ಳಿ!