ಇತ್ತೀಚೆಗೆ ಸಾಲ ಮಾಡಿ ಗೃಹ ನಿರ್ಮಾಣ ಅಥವಾ ಇನ್ನಿತರೆ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದರಂತೆಯೇ RBI ರೆಪೊ ದರ ಕಡಿಮೆ ಮಾಡಿದೆ.
ಏನಿದು ರೆಪೊ ರೇಟ್ ?
ಕೇಂದ್ರ ಬ್ಯಾಂಕ್ ಇತರ ಬ್ಯಾಂಕ್ ಗಳಿಗೆ ಅಗತ್ಯ ಬಿದ್ದಾಗ ಸಾಲ ನೀಡುವ ಬಡ್ಡಿ ದರವನ್ನು ರೆಪೊ ದರ ಎನ್ನುವರು.
ಈ ವರ್ಷ RBI ಈಗಾಗಲೇ ಫೆಬ್ರವರಿ 7 ರಂದು 6.25%, ಏಪ್ರಿಲ್ 9 ರಂದು 6.00% ಮತ್ತು ಜೂನ್ 6 ರಂದು 5.50% ರೆಪೋ ದರವನ್ನು ಇಳಿಸಿದ್ದಿತ್ತು. ಆಗಾಗ್ಗೆ, ವಿಶ್ವ ಮಾರುಕಟ್ಟೆ ಬಡ್ಡಿದರಗಳ ಪರಿಣಾಮ ಮತ್ತು ಅಮೆರಿಕಾ-ಭಾರತ ಆರ್ಥಿಕ ಪರಿಸ್ಥಿತಿಗಳನ್ನು ಗಮನಿಸಿ, ಆಗಸ್ಟ್ ಮತ್ತು ಅಕ್ಟೋಬರ್ ನಲ್ಲಿ RBI ದರವನ್ನು ಸ್ಥಗಿತ ಮಾಡಿತ್ತು.
ಗೃಹ ಸಾಲ ಪಡೆದವರಿಗೆ ಲಾಭ
ಗೃಹ ಸಾಲ ಪಡೆದವರಿಗೆ ಇದರಿಂದ ಪ್ರತಿ ತಿಂಗಳು ಕಟ್ಟುವ ಬಡ್ಡಿ ದರ ಕಡಿಮೆ ಮಾಡುತ್ತದೆ.
ಗೃಹ ಸಾಲದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
8.5% ಬಡ್ಡಿದರದಲ್ಲಿ 15 ವರ್ಷಗಳ ಅವಧಿಗೆ 25 ಲಕ್ಷ ರೂ. ಸಾಲ
ಪ್ರಸ್ತುತ ಇಎಂಐ- 24,618 ರೂ.
8.25% ದರ ಕಡಿತದ ಬಳಿಕ ಇಎಂಐ – 24,254 ರೂ.
ಪ್ರಸ್ತುತ ಬಡ್ಡಿ- 19,31,328 ರೂ.
8.25% ದರ ಕಡಿತ ನಂತರ ಬಡ್ಡಿ – 18,65,632 ರೂ.
ಉಳಿತಾಯ – 65,696 ರೂ.