ದೇಶದ ಲಕ್ಷಾಂತರ ಆಂಡ್ರಾಯ್ಡ್ಸಮೊಬೈಲ್ ಬಳಕೆದಾರರಿಗೆ ಸೈಬರ್ ಶಾಕ್! ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆ CERT-In (Indian Computer Emergency Response Team) ಇದೀಗ ತುರ್ತು ಎಚ್ಚರಿಕೆ ನೀಡಿದೆ. ಕಾರಣ – ಹೊಸ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ಗಳಲ್ಲಿ ಪತ್ತೆಯಾದ ಗಂಭೀರ ಸೈಬರ್ ದುರ್ಬಲತೆಗಳು. ಹೌದು, ಹ್ಯಾಕರ್ಗಳು ನಿಮ್ಮ ಫೋನ್ನ ಸಂಪೂರ್ಣ ನಿಯಂತ್ರಣ ಪಡೆಯುವಷ್ಟು ಅಪಾಯದ ಸ್ಥಿತಿ ನಿರ್ಮಾಣವಾಗಿದೆ!
CERT-In ಬಿಡುಗಡೆ ಮಾಡಿದ CIVN-2025-0293 ವರದಿಯ ಪ್ರಕಾರ, ಈ ದುರ್ಬಲತೆಗಳು ಆಂಡ್ರಾಯ್ಡ್ 13 ಹಾಗೂ ಅದರ ಮೇಲಿನ ಆವೃತ್ತಿಗಳಲ್ಲಿ ಕಂಡುಬಂದಿವೆ. ಅಂದರೆ, ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ Samsung, OnePlus, Vivo, Oppo, Xiaomi, Realme ಮತ್ತು Motorola ಹೀಗೆ ಎಲ್ಲ ಬ್ರ್ಯಾಂಡ್ಗಳ ಫೋನ್ಗಳು ಅಪಾಯದಲ್ಲಿವೆ.
Samsung, OnePlus, Realme, Redmi/Xiaomi, Oppo, Vivo, Motorola ಈ ಫೋನುಗಳಲ್ಲಿ ಬಳಸಲ್ಪಡುವ Qualcomm, MediaTek, Broadcom, ಮತ್ತು Unisoc ಚಿಪ್ಗಳಲ್ಲಿಯೇ ಸೈಬರ್ ದುರ್ಬಲತೆ ಪತ್ತೆಯಾಗಿದೆ.
ಇದನ್ನೂ ಓದಿರಿ: Sarojini Damodaran Scholarship: ಪದವಿ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
ಹ್ಯಾಕರ್ಗಳು ಏನು ಮಾಡಬಹುದು?
- ನಿಮ್ಮ ಫೋನ್ನ ಸಂಪೂರ್ಣ ನಿಯಂತ್ರಣ ಪಡೆಯಬಹುದು
- ವೈಯಕ್ತಿಕ ಫೋಟೋಗಳು, ವಾಟ್ಸಾಪ್ ಮೆಸೇಜ್ಗಳು, ಬ್ಯಾಂಕ್ ವಿವರಗಳು ಸೇರಿದಂತೆ ಮಹತ್ವದ ಡೇಟಾ ಕದಿಯಬಹುದು
- ದುಷ್ಟ ಕೋಡ್ ಅಥವಾ ಮಲ್ವೇರ್ ಇನ್ಸ್ಟಾಲ್ ಮಾಡಿ ಫೋನ್ ಹಾಳುಮಾಡಬಹುದು
- ಕ್ಯಾಮೆರಾ ಮತ್ತು ಮೈಕ್ರೋಫೋನ್ ಹ್ಯಾಕ್ ಮಾಡಿ ನಿಮ್ಮ ಗೌಪ್ಯತೆ ಉಲ್ಲಂಘಿಸಬಹುದು
CERT-In ಈ ಬೆದರಿಕೆಯನ್ನು “High Risk” ವಿಭಾಗಕ್ಕೆ ಸೇರಿಸಿದೆ, ಅಂದರೆ ಇದು ಅತ್ಯಂತ ಗಂಭೀರ ಮಟ್ಟದ ಎಚ್ಚರಿಕೆ.
ಕೇವಲ ಫೋನ್ ಅಲ್ಲ — ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಟಿವಿಗೂ ಅಪಾಯ!
ಗೂಗಲ್ನ ನವೆಂಬರ್ 2025ರ Android Security Bulletin ಪ್ರಕಾರ, ಈ ದುರ್ಬಲತೆಗಳು ಕೇವಲ ಸ್ಮಾರ್ಟ್ಫೋನ್ಗಳಿಗೆ ಸೀಮಿತವಲ್ಲ. ಅದೇ ಚಿಪ್ಗಳನ್ನು ಬಳಸಿರುವ ಟ್ಯಾಬ್ಲೆಟ್ಗಳು ಮತ್ತು ಸ್ಮಾರ್ಟ್ ಟಿವಿಗಳು ಸಹ ಅಪಾಯದಲ್ಲಿವೆ. ಹೀಗಾಗಿ ಹ್ಯಾಕರ್ಗಳು ಕೇವಲ ನಿಮ್ಮ ಫೋನ್ ಮಾತ್ರವಲ್ಲ, ಮನೆಯ ಇತರೆ ಸ್ಮಾರ್ಟ್ ಸಾಧನಗಳಿಗೂ ಪ್ರವೇಶ ಪಡೆಯಬಹುದು.
ಇದನ್ನೂ ಓದಿರಿ: HAL India Recruitment: ವಿಸಿಟಿಂಗ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ನಿಮ್ಮ ಫೋನ್ನ್ನು ಸುರಕ್ಷಿತವಾಗಿಡಲು ಮಾಡಬೇಕಾದ ಕ್ರಮಗಳು
- oftware update ತಕ್ಷಣ ಮಾಡಿ – Android Security Patch ಲಭ್ಯವಿದ್ದರೆ ತಕ್ಷಣ ಇನ್ಸ್ಟಾಲ್ ಮಾಡಿ.
- ಅಪರಿಚಿತ ಆಪ್ಸ್ಗಳನ್ನ ಫೋನಿಗೆ ಸೇರಿಸಿಕೊಳ್ಳಬೇಡಿ – Google Play Store ಹೊರತುಪಡಿಸಿ ಬೇರೆ ವೆಬ್ಸೈಟ್ಗಳಿಂದ APK ಫೈಲ್ಗಳನ್ನು ಡೌನ್ಲೋಡ್ ಮಾಡಬೇಡಿ.
- ಎಂಟಿ ವೈರಸ್ ಅಥವಾ ಮೊಬೈಲ್ ಸೆಕ್ಯೂರಿಟಿ ಆ್ಯಪ್ ಬಳಸಿ – ವಿಶ್ವಾಸಾರ್ಹ ಆ್ಯಪ್ಗಳ ಮೂಲಕ ನಿಯಮಿತ ಸ್ಕ್ಯಾನ್ ಮಾಡಿ.
- Public Wi-Fi ಮೂಲಕ ಬ್ಯಾಂಕಿಂಗ್ ಕಾರ್ಯ ಬೇಡ – ಸಾರ್ವಜನಿಕ ನೆಟ್ವರ್ಕ್ಗಳು ಹ್ಯಾಕಿಂಗ್ಗೆ ಸುಲಭವಿದೆ.
- ಹಳೆಯ ಫೋನ್ಗಳ ಬಳಕೆ ನಿಲ್ಲಿಸಿ – ಉತ್ಪಾದಕರು ಸೆಕ್ಯೂರಿಟಿ ಅಪ್ಡೇಟ್ ನೀಡದ ಸಾಧನಗಳನ್ನು ಬಿಟ್ಟು ಹೊಸದನ್ನು ಬಳಸುವುದು ಉತ್ತಮ.
ಸುರಕ್ಷೆ ನಿಮ್ಮ ಕೈಯಲ್ಲಿದೆ
ಸೈಬರ್ ಅಪಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಒಂದು ಸಣ್ಣ ನಿರ್ಲಕ್ಷ್ಯ — ಅಸುರಕ್ಷಿತ ಲಿಂಕ್ ಕ್ಲಿಕ್ ಮಾಡುವುದು, ಅಪರಿಚಿತ ಆ್ಯಪ್ ಇನ್ಸ್ಟಾಲ್ ಮಾಡುವುದು ಅಥವಾ ಅಪ್ಡೇಟ್ ಮಾಡದೆ ಬಿಟ್ಟುಬಿಡುವುದು — ನಿಮ್ಮ ವೈಯಕ್ತಿಕ ಮಾಹಿತಿ ಹ್ಯಾಕರ್ಗಳ ಕೈಗೆ ಹೋಗಲು ಸಾಕು.
ಆದ್ದರಿಂದ ಯಾವತ್ತೂ ಗಮನದಲ್ಲಿಡಿ: update, protect, backup — ಇವೇ ಮೂರು ಸುಲಭ ಹಂತಗಳು ನಿಮ್ಮ ಫೋನ್ ಸುರಕ್ಷಿತವಾಗಿಡುವ ಅಸ್ತ್ರಗಳು.