ಭಾರತದಲ್ಲಿ ಮೊಬೈಲ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರೊಂದಿಗೆ ಮೊಬೈಲ್ ಕಳ್ಳತನ ಮತ್ತು ಕಳೆದುಹೋಗುವ ಪ್ರಕರಣಗಳ ಸಂಖ್ಯೆಯೂ ವೇಗವಾಗಿ ಏರಿಕೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ, ನಿಮ್ಮ ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಅದನ್ನು ಟ್ರೇಸ್ (Mobile Phone Trace) ಮಾಡಲು ಕೇಂದ್ರ ದೂರ ಸಂಪರ್ಕ ಇಲಾಖೆ ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಎಂಬ ಪೋರ್ಟಲ್ ಒಂದನ್ನ ಪರಿಚಯಿಸಿದೆ, ಅದರಿಂದಾಗುವ ಪ್ರಯೋಜನಗಳ ಕುರಿತು ಮತ್ತು ಕಳೆದುಹೋದ ಫೋನ್ ಹೇಗೆ ಸುಲಭವಾಗಿ ಮರಳಿ ಪಡೆಯಬಹುದು ಎಂಬ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.
ಹಲವರಿಗೆ ಈ ಪೋರ್ಟಲ್ ಕುರಿತಾಗಿ ಕೇಳಿದ್ದರೂ, ಅಲ್ಲಿ ಅಪ್ಲೈ ಮಾಡುವುದು ಹೇಗೋ ಏನೋ ಎಂದು ಸುಮ್ಮನಾಗಿಬಿಡುತ್ತಾರೆ. ನಾವಿಲ್ಲಿ ಕಳೆದ ಫೋನನ್ನು ಟ್ರೇಸ್ ಮಾಡುವ, ಲಾಕ್ ಮಾಡುವ ಮತ್ತು ದುರುಸಲ್ಲಿಸಲು ಸಹಾಯಕವಾಗುವ ಈ ಆಫ್ ಕುರಿತಾಗಿ ಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೊನೆಯವರೆಗೂ ಓದುವ ಮೂಲಕ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಿ. ಈ ಲೇಖನ ಇಷ್ಟವಾದರೆ ಇದೇ ರೀತಿಯ ಮಾಹಿತಿಗಳನ್ನು ಓದಲು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ ನಮ್ಮೊಂದಿಗೆ ಸೇರಿಕೊಳ್ಳಿ.
ಇದನ್ನೂ ಓದಿರಿ: Federal Bank Scholarship: 1 ಲಕ್ಷ ರೂ. ವಿದ್ಯಾರ್ಥಿವೇತನ, ಲ್ಯಾಪ್ ಟಾಪ್ ಖರೀದಿಗೆ 40,000 ಇಂದೇ ಅರ್ಜಿ ಸಲ್ಲಿಸಿ
ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಎಂದರೇನು?
CEIR ಒಂದು ಕೇಂದ್ರ ಸರ್ಕಾರದ ಆನ್‌ಲೈನ್ ವ್ಯವಸ್ಥೆಯಾಗಿದೆ. ಇದರಲ್ಲಿ ದೂರು ಸಲ್ಲಿಸುವ ಮೂಲಕ ನೀವು ನಿಮ್ಮ ಮೊಬೈಲ್ ಫೋನ್‌ನ್ನು ಟ್ರೇಸ್ ಮಾಡಬಹುದು, ಕಳುವಾದ ಫೋನ್‌ನ್ನು ಬ್ಲಾಕ್ ಮಾಡಬಹುದು ಅಥವಾ ಸಿಕ್ಕಿದ ಮೇಲೆ ಮರುಚಾಲನೆ ಮಾಡಿಸಬಹುದು.
ಕಳುವಾದ ಮೊಬೈಲ್ ಅನ್ನು ಬ್ಲಾಕ್ ಮಾಡುವುದು ಯಾಕೆ ಮುಖ್ಯ?
- ಡೇಟಾ ರಕ್ಷಣೆ: ಮೊಬೈಲ್‌ನಲ್ಲಿ ಬ್ಯಾಂಕಿಂಗ್ ಅಪ್ಲಿಕೇಶನ್, ಖಾತೆ, ಪಾಸ್‌ವರ್ಡ್, ಫೋಟೋ, ವೀಡಿಯೋ ಇತ್ಯಾದಿ ವೈಯಕ್ತಿಕ ಮಾಹಿತಿಯು ಇರುತ್ತದೆ. ಕಳ್ಳರು ಅದನ್ನು ದುರುಪಯೋಗ ಮಾಡದಂತೆ ತಡೆಯಬಹುದು. ಈ ಕಾರಣಕ್ಕಾಗಿಯೇ ನಾವು ಕಾಣೆಯಾದ ತಕ್ಷಣ ಫೋನನ್ನು ಬ್ಲಾಕ್ ಮಾಡುವುದು ಅತಿ ಅವಶ್ಯವಾಗಿದೆ.
- SIM ದುರ್ಬಳಕೆ ತಡೆ: SIM ಬ್ಲಾಕ್ ಮಾಡದಿದ್ದರೆ OTP ಅಥವಾ ಕರೆಗಳ ಮೂಲಕ ದುರುಪಯೋಗ ಸಾಧ್ಯ. ಇದರಿಂದಾಗಿ ನಮ್ಮ ಸಿಮ್ ಕಾರ್ಡನ್ನು ಬೇರೆ ಬೇರೆ ದುರುದ್ದೇಶ ಪೂರಿತ ಕೆಲಸಗಳಿಗೆ ಬಳಕೆಯಾಗುವುದನ್ನು ತಡೆಗಟ್ಟಬುದು.
- IMEI ಬ್ಲಾಕ್: ಫೋನ್‌ನ ವಿಶಿಷ್ಟ IMEI ಸಂಖ್ಯೆಯನ್ನು ಬ್ಲಾಕ್ ಮಾಡಿದರೆ, ಆ ಫೋನ್ ಯಾವುದೇ SIMನಿಂದಲೂ ನೆಟ್‌ವರ್ಕ್‌ಗೆ ಸಂಪರ್ಕವಾಗುವುದಿಲ್ಲ. ಈ ಮೂಲಕ ಸುರಕ್ಷತೆಯನ್ನು ಕಾಪಾಡಿಕೊಳ್ಳಹುದಾಗಿರುತ್ತದೆ.
ಆನ್‌ಲೈನ್‌ನಲ್ಲಿ ಮೊಬೈಲ್ ಟ್ರೇಸ್ (Mobile Phone Trace) ಮಾಡುವ ವಿಧಾನ
- ಅಧಿಕೃತ ಜಾಲತಾಣ www.ceir.gov.in ತೆರೆಯಿರಿ.
- ಅಲ್ಲಿ ನಿಮಗೆ ಬ್ಲಾಕ್ ಮಾಡಲು ಅನ್ ಬ್ಲಾಕ್ ಮಾಡಲು ಆಯ್ಕೆಗಳು ಕಂಡಿಬರುತ್ತವೆ.
- ನಂತರ IMEI 1, ಮೊಬೈಲ್ ನಂಬರ್, ಮಾಡೆಲ್ ನೇಮ್, ಕಳೆದುಕೊಂಡ ಸ್ಥಳ ಇವುಗಳ ಮಾಹಿತಿಯನ್ನು ಸಂಪೂರ್ಣವಾಗಿ ನೀಡಿರಿ.
- ವಿವರಗಳನ್ನು ಸಂಪೂರ್ಣವಾಗಿ ನೀಡಿದ ನಂತರ “Proceed” ಕ್ಲಿಕ್ ಮಾಡಿ ದೂರು ಸಲ್ಲಿಸಿ.
IMEI ನಂಬರ್ ಎಲ್ಲಿಂದ ಸಿಗುತ್ತದೆ?
IMEI (International Mobile Equipment Identity) ಪ್ರತಿ ಮೊಬೈಲ್‌ಗೂ ವಿಶಿಷ್ಟವಾಗಿದೆ. ಇದು ಹಿಂಬದಿ ಸ್ಟಿಕ್ಕರ್‌ನಲ್ಲಿ ಅಥವಾ ಖರೀದಿ ಬಿಲ್‌ನಲ್ಲಿ ಲಭ್ಯ. ಮುಂದಿನ ಸಂದರ್ಭಗಳಲ್ಲಿ ಉಪಯೋಗಿಸಲು ಅದನ್ನು ಸುರಕ್ಷಿತವಾಗಿ ಬರೆದು ಇಟ್ಟುಕೊಳ್ಳಿ.
ಇದನ್ನೂ ಓದಿರಿ: ಬ್ಯಾಂಕ್ ಆಫ್ ಬರೋಡಾದಲ್ಲಿ ಭರ್ಜರಿ ಅವಕಾಶ: ದೇಶಾದ್ಯಂತ 2700 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಆರಂಭ!
CEIR ಪೋರ್ಟಲ್ ಅಂಕಿ-ಅಂಶ (ಮೇ 2023 ರಿಂದ)
- ದಾಖಲಾದ ದೂರುಗಳು: 50 ಲಕ್ಷಕ್ಕೂ ಹೆಚ್ಚು
- ಬ್ಲಾಕ್ ಮಾಡಿದ ಫೋನ್‌ಗಳು: 31 ಲಕ್ಷ
- ಟ್ರೇಸ್ ಮಾಡಲಾದ ಫೋನ್‌ಗಳು: 19 ಲಕ್ಷ
- ಮಾಲೀಕರಿಗೆ ಹಿಂತಿರುಗಿದ ಮೊಬೈಲ್‌ಗಳು: 4.22 ಲಕ್ಷ
ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಆತಂಕಪಡಬೇಡಿ. ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಪೋರ್ಟಲ್‌ನ ಸಹಾಯದಿಂದ ನಿಮ್ಮ ಫೋನ್‌ನ್ನು ಟ್ರೇಸ್ (Mobile Phone Trace) ಮಾಡಿ, ಡೇಟಾ ಸುರಕ್ಷತೆ ಕಾಯ್ದುಕೊಳ್ಳಿ ಮತ್ತು ಕಾನೂನಾತ್ಮಕ ರೀತಿಯಲ್ಲಿ ದೂರು ಸಲ್ಲಿಸಿ. ನಿಮ್ಮ ಚಿಕ್ಕ ಎಚ್ಚರಿಕೆಯ ಕ್ರಮವೇ ದೊಡ್ಡ ನಷ್ಟವನ್ನು ತಪ್ಪಿಸಬಹುದು.